ಧೋನಿ ಟೆಸ್ಟ್ ಸಾರಥ್ಯ ಕಳಪೆ
ಭಾರತ ತಂಡ ವಿದೇಶದ ಟೆಸ್ಟ್ ಸರಣಿಗಳಲ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದು...
ವೆಲ್ಲಿಂಗ್ಟನ್: ಭಾರತ ತಂಡ ವಿದೇಶದ ಟೆಸ್ಟ್ ಸರಣಿಗಳಲ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದು, ನಾಯಕ ಮಹೇಂದ್ರ ಸಿಂಗ್ ಧೋನಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಅಲ್ಲದೆ ಧೋನಿ ಟೆಸ್ಟ್ ನಾಯಕತ್ವ ತೀರಾ ಕಳಪೆಯಾಗಿದೆ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಸತತ ವೈಫಲ್ಯದಿಂದ ಧೋನಿ ನಾಯಕತ್ವದ ಬಗ್ಗೆ ದ್ರಾವಿಡ್ ಹಾಗೂ ಗಂಗೂಲಿ ಇಬ್ಬರೂ ಅತೃಪ್ತಿ ವ್ಯಕ್ತ ಪಡಿಸಿದ್ದರೂ, ಮುಂದಿನ ವರ್ಷ ಏಕದಿನ ವಿಶ್ವಕಪ್ ಪಂದ್ಯಾವಳಿ ಹಿನ್ನಲೆಯಲ್ಲಿ ತಂಡದಲ್ಲಿ ನಾಯಕತ್ವದ ಬದಲಾವಣೆ ಮಾಡದಿರುವುದು ಉತ್ತಮ ಎಂದು ಹೇಳಿದ್ದಾರೆ.