ಭಾರತದ ಅಬ್ಬರದ ಮುಂದೆ 'ಪಾಪ' ಪಪುವಾ
ಮಧ್ಯಮ ಕ್ರಮಾಂಕದ ದಾಂಡಿಗ ಸಂಜು ಸ್ಯಾಮ್ಸನ್ರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ 19 ವರ್ಷದೊಳಗಿನವರ....
ಶಾರ್ಜಾ: ಮಧ್ಯಮ ಕ್ರಮಾಂಕದ ದಾಂಡಿಗ ಸಂಜು ಸ್ಯಾಮ್ಸನ್ರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ದುರ್ಬಲ ಪಪುವಾ ನ್ಯೂ ಗಿನಿ ತಂಡದ ವಿರುದ್ಧ 245 ರನ್ಗಳಿಂದ ನಿರಾಯಾಸ ಗೆಲವು ದಾಖಲಿಸಿದೆ.
ಈ ಗೆಲವಿನೊಂದಿಗೆ ಭಾರತ, 3 ಪಂದ್ಯಗಳಿಂದ ಅಂಕ ಸಂಪಾದನೆಯನ್ನು 6ಕ್ಕೆ ಹೆಚ್ಚಿಸಿಕೊಂಡಿತು. ಇದರೊಂದಿಗೆ ನಾಲ್ಕು ತಂಡಗಳ 'ಎ' ಗುಂಪಿನಲ್ಲಿ ಆಡಿದ ಎಲ್ಲ ಮೂರೂ ಪಂದ್ಯಗಳಲ್ಲಿ ಜಯಶಾಲಿಯಾಗುವ ಮೂಲಕ ಅಜೇಯವಾಗಿ ಅಗ್ರಸ್ಥಾನದ ಗೌರವದೊಂದಿಗೆ ಕ್ವಾರ್ಟರ್ಫೈನಲ್ ತಲುಪಿತು.
ಶಾರ್ಜಾದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ಭಾರತ 50 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 301 ರನ್ಗಳ ಬೃಹತ್ ಮೊತ್ತ ಸಂಪಾದಿಸಿತು.
ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಸಂಜು ಸ್ಯಾಮ್ಸನ್ ಕೇವಲ 48 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 85 ರನ್ ಚಚ್ಚುವುದರೊಂದಿಗೆ ತಂಡದ ಮೊತ್ತ ತ್ರಿಶತಕದ ಗಡಿ ದಾಟಲು ಕಾರಣರಾದರು.
ಉಳಿದಂತೆ ಆರಂಭಿಕ ಅಂಕುಶ್ ಬೇನ್ಸ್ (59ರನ್, 83 ಎಸೆತ, 5 ಬೌಂಡರಿ, 1 ಸಿಕ್ಸರ್) ಅರ್ಧಶತಕ ದಾಖಲಿಸಿದರೆ, ಅಖಿಲ್ ಪೆರ್ವಾಡಕರ್ (37), ಶ್ರೇಯಸ್ ಅಯ್ಯರ್ (36) ಮತ್ತು ನಾಯಕ ವಿಜಯ್ ಜೋಲ್ (35) ಸಹ ಉಪಯುಕ್ತ ಕಾಣಿಕೆ ನೀಡಿದರು. ಕೆಳಕ್ರಮಾಂಕದಲ್ಲಿ ಸರ್ಫರಾಜ್ ಖಾನ್ ಕೇವಲ 18 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಹೊಂದಿದ್ದ ಅಜೇಯ 34 ರನ್ಗಳಿಸಿ ಗಮನ ಸೆಳೆದರು.
ಪಪುವಾ ನ್ಯೂ ಗಿನಿ ಪರ ಉತ್ತಮ ದಾಳಿ ನಡೆಸಿದಅಲೇಯಿ ನಾವೊ 3 ವಿಕೆಟ್ ಪಡೆದರು.
ಕುಸಿದ ಪಪುವಾ ನ್ಯೂ ಗಿನಿ ಭಾರತ ನೀಡಿದ 302 ರನ್ಗಳ ಕಠಿಣ ಗುರಿ ಬೆಂಬತ್ತಿದ ಪಪುವಾ ನ್ಯೂ ಗಿನಿ 28.2 ಓವರುಗಳಲ್ಲಿ ಕೇವಲ 56 ರನ್ಗಳ ಅತ್ಯಲ್ಪ ಮೊತ್ತಕ್ಕೆ ಪತನಗೊಂಡಿತು. ಈಗಷ್ಟೇ ಜಾಗತಿಕ ಕ್ರಿಕೆಟ್ನಲ್ಲಿ ಅಂಬೆಗಾಲಿಡುತ್ತಿರುವ ಪಪುವಾ ನ್ಯೂ ಗಿನಿ ಆಟಗಾರರಿಗೆ ಯಾವುದೇ ಹಂತದಲ್ಲೂ ಭಾರತದ ಅನುಭವಿ ದಾಳಿಯ ಮುಂದೆ ಕಿಂಚಿತ್ತೂ ಪ್ರತಿರೋಧ ತೋರಲು ಸಾಧ್ಯವಾಗಲಿಲ್ಲ.
ಆರಂಭಿಕ ರಿಲೀ ಹೆಕುರೆ 20 ರನ್ಗಳಿಸಿದ್ದೇ ತಂಡದ ಪರ ವೈಯಕ್ತಿಕ ಗರಿಷ್ಠ ಮೊತ್ತವಾದರೆ, ಒಟ್ಟು 9 ಬ್ಯಾಟ್ಸ್ಮನ್ಗಳು ಕನಿಷ್ಠ ಎರಡಂಕಿಯ ಗಡಿ ಸಹ ತಲುಪಲಿಲ್ಲ.
ಭಾರತದ ಬೌಲಿಂಗ್ನಲ್ಲಿ ಮಿಂಚಿದ ಸ್ಪಿನ್ನರ್ ಕುಲ್ದೀಪ್ ಯಾದನ್ 4 ಹಾಗೂ ಮೋನುಕುಮಾರ್ 3 ವಿಕೆಟ್ ಉರುಳಿಸಿ ಗಮನ ಸೆಳೆದರು.
ಸ್ಕೋರ್ ವಿವರ
ಭಾರತ 50 ಓವರುಗಳಲ್ಲಿ 6 ವಿಕೆಟ್ಗೆ 301
ಅಂಕುಶ್ ಬೇನ್ಸ್ ಸಿ ಜೋಸೆಫ್ ಬಿ ನಾವೊ 59
ಅಖಿಲ್ ಹೆರ್ವಾಡಕರ್ ಸಿ ಸ್ಯಾಮ್ ಬಿ ಗೆಬಾಯಿ 37
ವಿಜಯ್ ಜೋಲ್ ಬಿ ನಾವೊ 35
ಸಂಜು ಸ್ಯಾಮ್ಸನ್ ಸಿ ಜೋಸೆಫ್ ಬಿ ಮೊರಿಯಾ 85
ಶ್ರೇಯಸ್ ಅಯ್ಯರ್ ಸಿ ಗೆಬಲ್ ಬಿ ನಾವೊ 36
ಸರ್ಫರಾಜ್ ಖಾನ್ ಅಜೇಯ 34
ದೀಪಕ್ ಹೂಡಾ ಸಿ ಬಾವು ಬಿ ಗೆಬಲ್ 3
ಆಮೀರ್ ಗನಿ ಅಜೇಯ 2
ಇತರೆ: (ಬೈ-1, ಲೆಗ್ಬೈ-2, ವೈ-5, ನೋಬಾಲ್-2) 10.
ವಿಕೆಟ್ ಪತನ: 1-58, 2-132, 3-139, 4-255, 5-263, 6-288.
ಬೌಲಿಂಗ್ ವಿವರ: ಅಲೇಯಿ ನಾವೊ 10-0-46-3, ಕಬುವಾ ಮೊರಿಯಾ 10-1-68-1, ಸಕಾವಯಿ ಗೆಬಾಯಿ 9-0-73-2, ರಿಲೀ ಹೆಕುರೆ 10-3-50-0, ಅಲನ್ ಜೋಸೆಫ್ 7-0-43-0, ಹಿರಿ ಹಿರಿ 4-0-18-0.
ಪಪುವಾ ನ್ಯೂ ಗಿನಿ 28.2 ಓವರುಗಳಲ್ಲಿ 56
ಕಿಪ್ಲಿನ್ ದೊರಿಗಾ ಬಿ ಮೊನುಕುಮಾರ್ 1
ರಿಲೀ ಹೆಕುರೆ ಎಲ್ಬಿ ಬಿ ಕುಲ್ದೀಪ್ 20
ರಾಹೊ ಸ್ಯಾಮ್ ಬಿ ಮೊನುಕುಮಾರ್ 0
ಡೊಗೆಡೊ ಬಾವು ಎಲ್ಬಿ ಬಿ ಗನಿ 6
ಹಿರಿ ಹಿರಿ ಸಿ ಖಾನ್ ಬಿ ಹೂಡಾ 13
ಅಲನ್ ಜೋಸೆಫ್ ಬಿ ಮೊನುಕುಮಾರ್ 4
ಟಾಮ್ ವಿಲ್ಲೀ ಎಲ್ಬಿ ಬಿ ಹೂಡಾ 0
ಮಿಕಾಹ್ ಪೊಕಾನಾ ಸಿ ಹೂಡಾ ಬಿ ಕುಲ್ದೀಪ್ 1
ಕಬುವಾ ಮೊರಿಯಾ ಸಿ ಮಿಲಿಂದ್ ಬಿ ಕುಲ್ದೀಪ್ 0
ಸಕಾವಯಿ ಗೆಬಾಯಿ ಅಜೇಯ 2
ಅಲೇಯಿ ನಾವೊ ಬಿ ಕುಲ್ದೀಪ್ 0
ಇತರೆ: (ವೈ-9) 9.
ವಿಕೆಟ್ ಪತನ: 1-3, 2-3, 3-33, 4-33, 5-52, 6-52, 7-53, 8-53, 9-54, 10-56.
ಬೌಲಿಂಗ್ ವಿವರ: ಚಾಮಾ ಮಿಲಿಂದ್ 5-1-13-0, ಮೋನುಕುಮಾರ್ 6-1-13-3, ಕುಲ್ದೀಪ್ ಯಾದವ್ 8.2-1-10-4, ಆಮೀರ್ ಗನಿ 4-1-15-1, ದೀಪಕ್ ಹೂಡಾ 5-1-5-2.