ಮಾ.2ರಂದು ಸಾಂಪ್ರದಾಯಿಕ ಎದುರಾಳಿಗಳ ಕಾದಾಟ
ನವದೆಹಲಿ: ಪ್ರಸಕ್ತ ಸಾಲಿನ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಮುಖ ತಂಡಗಳಾಗಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ಮಾ.2ರಂದು ಪರಸ್ಪರ ಮುಖಾಮುಖಿಯಾಗಲಿವೆ. ಈ ಬಾರಿಯ ಏಷ್ಯಾಕಪ್ ಪಂದ್ಯಾವಳಿ ಫೆ.25ರಿಂದ ಮಾ.8ರವರೆಗೆ ನಡೆಯಲಿದ್ದು, ಎಲ್ಲಾ ಪಂದ್ಯಗಳು ಢಾಕಾ ಹಾಗೂ ಮೀರ್ಪುರದಲ್ಲಿ ಜರುಗಲಿವೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಟೂರ್ನಿಯ ಕೇಂದ್ರ ಬಿಂದುವಾಗಿದೆ. ವೇಳಾಪಟ್ಟಿಯಲ್ಲಿ ಯಾವುದೇ ಪಂದ್ಯಕ್ಕೂ ಹೆಚ್ಚುವರಿ ದಿನವನ್ನು ನಿಗದಿಪಡಿಸಿಲ್ಲ. ಹಾಗಾಗಿ ಯಾವುದೇ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಮತ್ತೆ ಪಂದ್ಯವನ್ನು ನಡೆಸುವ ಅವಕಾಶವಿಲ್ಲದಂತಾಗಿದೆ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿವೆ.
ಪಂದ್ಯಾವಳಿಯ ವೇಳಾಪಟ್ಟಿ
ದಿನ ತಂಡಗಳು ಸ್ಥಳ
ಫೆ.25: ಪಾಕಿಸ್ತಾನ-ಶ್ರೀಲಂಕಾ, ಫಾತುಲ್ಹಾ
ಫೆ.26: ಬಾಂಗ್ಲಾದೇಶ-ಭಾರತ, ಫಾತುಲ್ಹಾ
ಫೆ.27: ಅಫ್ಘಾನಿಸ್ತಾನ-ಪಾಕಿಸ್ತಾನ, ಫಾತುಲ್ಹಾ
ಫೆ.28: ಭಾರತ-ಶ್ರೀಲಂಕಾ, ಫಾತುಲ್ಹಾ
ಮಾ.1: ಬಾಂಗ್ಲಾದೇಶ-ಅಫ್ಘಾನಿಸ್ತಾನ,ಫಾತುಲ್ಹಾ
ಮಾ.2: ಭಾರತ-ಪಾಕಿಸ್ತಾನ, ಫಾತುಲ್ಹಾ
ಮಾ.3: ಅಫ್ಘಾನಿಸ್ತಾನ-ಶ್ರೀಲಂಕಾ,ಮೀರ್ಪುರ
ಮಾ.4: ಬಾಂಗ್ಲಾದೇಶ-ಪಾಕಿಸ್ತಾನ,ಮೀರ್ಪುರ
ಮಾ.5: ಅಫ್ಘಾನಿಸ್ತಾನ-ಭಾರತ, ಮೀರ್ಪುರ
ಮಾ.6: ಬಾಂಗ್ಲಾದೇಶ-ಶ್ರೀಲಂಕಾ,ಮೀರ್ಪುರ
ಮಾ.8: ಫೈನಲ್, ಮೀರ್ಪುರ