ಕ್ವಾರ್ಟರ್ಫೈನಲ್ಗೆ ಫೆರರ್
ರಿಯೋ ಡಿ ಜೆನೈರೊ: ಪ್ರಬಲ ಹೋರಾಟದ ನಡುವೆಯೂ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಎರಡನೇ ಶ್ರೇಯಾಂಕಿತ ಡೇವಿಡ್ ಫೆರರ್ ರಿಯೋ ಓಪನ್ ಟೆನಿಸ್ ಪಂದ್ಯಾವಳಿಯ ಕ್ವಾರ್ಟರ್ಫೈನಲ್ಗೆ ಪ್ರವೇಶಿಸಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಅರ್ಜೆಂಟೀನಾದ ಫೆಡೆರಿಕೊ ಡೆಲ್ಬೋನಿಸ್ ವಿರುದ್ಧ 7-6 (2), 6-1 ನೇರ ಸೆಟ್ಗಳ ಗೆಲವು ದಾಖಲಿಸಿದರು. ಮೊದಲ ಸೆಟ್ನಲ್ಲಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದ ಫೆರರ್ 7-6 (2)ರಿಂದ ತಮ್ಮದಾಗಿಸಿಕೊಂಡರು. 2ನೇ ಸೆಟ್ನಲ್ಲಿ ಎದುರಾಳಿಗೆ ಅವಕಾಶ ಕೊಡದ ಫೆರರ್ 6-1 ರಿಂದಮುನ್ನಡೆ ಪಡೆದು ಗೆಲವು ದಾಖಲಿಸಿದರು.