ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

'ಭವಿಷ್ಯದ ಬಗ್ಗೆ ಜಹೀರ್ ಚಿಂತಿಸಲಿ'

Mainashree
Updated On : 20 Feb 2014, 11:39 am

ನವದೆಹಲಿ: ಭಾರತ ತಂಡ ಇದೇ ವರ್ಷಾಂತ್ಯದಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಲಿದ್ದು, ಐದು ಟೆಸ್ಟ್ ಪಂದ್ಯಗಳ ಸರಣಿಯನ್ನಾಡಲಿದೆ. ಭಾರತ ತಂಡದ ಹಿರಿಯ ವೇಗಿ ಜಹೀರ್ ಖಾನ್‌ಗೆ ಕಠಿಣ ಸವಾಲು ಎದುರಾಗಲಿದೆ ಹಾಗಾಗಿ ಅವರು ತಮ್ಮ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕು ಎಂದು ಮಾಜಿ ನಾಯಕ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.   ಗಾಯದ ಸಮಸ್ಯೆಗೆ ಸಿಲುಕಿ ಸುದೀರ್ಘ ಸಮಯದ ನಂತರ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಪ್ರವಾಸದಲ್ಲಿ ತಂಡಕ್ಕೆ ಮರಳಿದ ಜಹೀರ್, ತಮ್ಮ ಲಯವನ್ನು ಕಂಡುಕೊಂಡು ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಾಡುವಲ್ಲಿ ವಿಫಲರಾಗಿದ್ದಾರೆ. ಆದರೂ ಜಹೀರ್ ಕಿವೀಸ್ ವಿರುದ್ಧ ದ್ವಿತೀಯ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ 51 ಓವರ್ ಮಾಡಿ 5 ವಿಕೆಟ್ ಪಡೆದಿದ್ದಾರೆ.  ಜಹೀರ್ ಖಾನ್ ಇಂಗ್ಲೆಂಡ್ ಪ್ರವಾಸದಲ್ಲಿ ಯಶಸ್ವಿಯಾಗುವರೇ? ನನಗಂತೂ ನಂಬಿಕೆ ಇಲ್ಲ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ಜಹೀರ್ ಖಾನ್ ತಮ್ಮ ಸಾಮರ್ಥ್ಯದ ಬಗ್ಗೆ ತಮ್ಮಷ್ಟಕ್ಕೆ ತಾವೇ ಪ್ರಶ್ನಿಸಿಕೊಳ್ಳಬೇಕಿದೆ. ಜಹೀರ್ ಖಾನ್ ಬೇರೆಯವರಂತೆ ತಮ್ಮ ಅಂತ್ಯವನ್ನು ನಿರಾಶಾದಾಯಕವಾಗಿ ಅಂತ್ಯಗೊಳಿಸಲು ಇಚ್ಛಿಸುವುದಿಲ್ಲ. ಆದರೆ ಇದರಿಂದ ಹೊರಬರುವುದು ಕಷ್ಟ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement