ರ್ಯಾಂಕಿಂಗ್: ಸೈನಾ ಸನಿಹಕೆ ಸಿಂಧು
ನವದೆಹಲಿ: ಭಾರತದ ಭರವಸೆಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರು ವಿಶ್ವ ಮಹಿಳಾ ಬ್ಯಾಡ್ಮಿಂಟನ್ ರ್ಯಾಂಕಿಂಗ್ನ ಸಿಂಗಲ್ಸ್ ವಿಭಾಗದಲ್ಲಿ ಒಂದು ಸ್ಥಾನ ಬಡ್ತಿ ಪಡೆದಿದ್ದು, 9ನೇ ಸ್ಥಾನಕ್ಕೇರಿದ್ದಾರೆ. ಇದರೊಂದಿಗೆ ಸಿಂಧು ರ್ಯಾಂಕಿಂಗ್ನಲ್ಲಿ, ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರನ್ನು ಸಮೀಪಿಸುತ್ತಿದ್ದಾರೆ. ಸಿಂಧು 9ನೇ ಸ್ಥಾನಕ್ಕೇರಿದ್ದರೆ, ಸೈನಾ 7ನೇ ಸ್ಥಾನದಲ್ಲಿದ್ದಾರೆ. ಅಖಿಲ ಭಾರತ ಮುಕ್ತ ಹಿರಿಯರ ರ್ಯಾಂಕಿಂಗ್ ಪಂದ್ಯಾವಳಿ ಗೆಲ್ಲುವ ಮುನ್ನ, ಸಯಿದ್ ಮೋದಿ ಅಂತಾರಾಷ್ಟ್ರೀ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದ್ದ ಸಿಂಧು ಬರುವ ಮಾರ್ಚ್ 4ರಿಂದ 9ರವರೆಗೆ ನಡೆಯಲಿರುವ ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್ಶಿಪ್ನಲ್ಲಿ ಮತ್ತು ಸೈನಾ ಭಾಗವಹಿಸಲಿದ್ದಾರೆ. ಪುರುಷರ ವಿಭಾಗದಲ್ಲಿ ಸೌರಭ್ ವರ್ಮಾ 9 ಸ್ಥಾನ ಮೇಲೇರಿದ್ದು, 41ನೇ ಸ್ಥಾನದಲ್ಲಿದ್ದಾರೆ. 18ನೇ ಸ್ಥಾನದಲ್ಲಿರುವ ಪರುಪಲ್ಲಿ ಕಶ್ಯಪ್ ಶ್ರೇಷ್ಠ ರ್ಯಾಂಕಿಂಗ್ ಹೊಂದಿರುವ ಭಾರತದ ಆಟಗಾರ ಎನಿಸಿದ್ದಾರೆ.