ಸಂಗಕ್ಕಾರ ಶತಕ, ಲಂಕೆಗೆ ಸರಣಿ
ಮೀರ್‌ಪುರ: ಅತ್ಯುತ್ತಮ ಫಾರ್ಮ್‌ನಲ್ಲಿರುವ ಕುಮಾರ್ ಸಂಗಕ್ಕಾರ(128) ಅವರ ಶತಕದ ನೆರವಿನಿಂದ ಶ್ರೀಲಂಕಾ ತಂಡವು ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಗೆಲವು ದಾಖಲಿಸಿದೆ.
ಗುರುವಾರ ಶೇರ್ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 61 ರನ್‌ಗಳ ಗೆಲವು ದಾಖಲಿಸಿದೆ. ಈ ಮೂಲಕ ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಲಂಕಾ ಮೂರು ಏಕದಿನ ಪಂದ್ಯಗಳ ಸರಣಿಯನ್ನು ವಶಪಡಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 289 ರನ್ ಕಲೆ ಹಾಕಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ 43 ಓವರ್‌ಗಳಲ್ಲಿ 228 ರನ್‌ಗಳಿಗೆ ಆಲೌಟ್ ಆಯಿತು.
ಶ್ರೀಲಂಕಾ ತಂಡದ ಪರ ಕುಮಾರ ಸಂಗಕ್ಕಾರ 115 ಎಸೆತಗಳನ್ನು ಎದುರಿಸಿ 14 ಬೌಂಡರಿಗಳ ನೆರವಿನಿಂದ 128 ರನ್ ಕಲೆಹಾಕಿದರು. ಅಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್:
ಶ್ರೀಲಂಕಾ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 289
ಕುಮಾರ ಸಂಗಕ್ಕಾರ 128, ಅಶನ್ ಪ್ರಿಯಂಜನ 60, ರುಬೆಲ್ ಹುಸೇನ್ 76ಕ್ಕೆ3
ಬಾಂಗ್ಲಾದೇಶ 43 ಓವರ್‌ಗಳಲ್ಲಿ 228
ಮುಶ್ಫಿಕುರ್ ರಹೀಮ್ 79, ಅನಾಮುಲ್ ಹಕ್ 42, ಸಚಿತ್ರ ಸೇನಾನಾಯಕೆ 33ಕ್ಕೆ2