ಡಿವಿಲಿಯರ್ಸ್ ವಿಶ್ವದಾಖಲೆ
ಪೋರ್ಟ್ ಎಲಿಜೆಬೆತ್: ವಿಕೆಟ್ ಕೀಪರ್ ಎಬಿ ಡಿವಿಲಿಯರ್ಸ್ ಅವರ ವಿಶ್ವದಾಖಲೆ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಎರಡನೇ ಕ್ರಿಕೆಟ್ ಟೆಸ್ಟ್‌ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತ ದಾಖಲಿಸಿದೆ. ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಕ್ರವಾರ ಎರಡನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ ತಂಡ 423 ರನ್‌ಗಳ ಮೊತ್ತದೊಂದಿಗೆ ತನ್ನ ಮೊದಲ ಇನಿಂಗ್ಸ್‌ನಲ್ಲಿ ಪತನ ಕಂಡಿತು.
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ವಿಕೆಟ್ ಕೀಪರ್ ಡಿವಿಲಿಯರ್ಸ್ (116ರನ್, 232 ಎಸೆತ, 14 ಬೌಂಡರಿ, 1 ಸಿಕ್ಸರ್) ಮತ್ತು ಜೀನ್ ಪಾಲ್ ಡುಮಿನಿ (123ರನ್, 231 ಎಸೆತ, 14 ಬೌಂಡರಿ) ಶತಕ ಬಾರಿಸಿ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಪೇರಿಸಲು ನೆರವಾದರು.
ವಿಲಿಯರ್ಸ್ ವಿಶ್ವದಾಖಲೆ: ಮೊದಲ ದಿನದಾಟದಲ್ಲೇ ಡಿವಿಲಿಯರ್ಸ್ ವಿಶ್ವದಾಖಲೆ ಸಾಧನೆಯೊಂದನ್ನು ಮಾಡಿದರು. ಅವರು ವೈಯಕ್ತಿಕ 50ರ ಗಡಿ ತಲುಪುತ್ತಿದ್ದಂತೆಯೇ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸತತ 12 ಅರ್ಧಶತಕ ಬಾರಿಸಿದ ಮೊದಲ ಆಟಗಾರ ಎನಿಸಿದರು. ಈ ಮುನ್ನ ವೆಸ್ಟ್ ಇಂಡೀಸ್‌ನ ಸರ್ ವಿವಿಯನ್ ರಿಚರ್ಡ್ಸ್ ಹಾಗೂ ಭಾರತದ ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹವಾಗ್ ಸತತ 11 ಪಂದ್ಯಗಳಲ್ಲಿ ಅರ್ಧಶತಕ ಪೂರೈಸಿದ್ದ ವಿಶ್ವದಾಖಲೆ ಸಾಧನೆಯನ್ನು ಡಿವಿಲಿಯರ್ಸ್ ಅಳಿಸಿ ಹಾಕಿದರು.
5ಕ್ಕೆ 214 ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ 423 (ಜೀನ್ ಪಾಲ್ ಡುಮಿನಿ 123, ಎಬಿ ಡಿವಿಲಿಯರ್ಸ್ 116, ನಾಥನ್ ಲಿಯೊನ್ 130ಕ್ಕೆ5).