ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸೆಮಿಫೈನಲ್‌ಗೆ ಸೋಮ್‌ದೇವ್

Mainashree
Updated On : 21 Feb 2014, 10:50 am

ನವದೆಹಲಿ: ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಸೋಮ್‌ದೇವ್ ದೇವ್‌ವರ್ಮನ್ ದೆಹಲಿ ಓಪನ್ ಎಟಿಪಿ ಟೆನಿಸ್ ಚಾಂಪಿಯನ್‌ಶಿಪ್‌ನ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ಇಲ್ಲಿನ ಆರ್.ಕೆ. ಖನ್ನಾ ಟೆನಿಸ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಎದುರಾಳಿ ಆಟಗಾರ ಚೀನಾದ ಜೀ ಝೆಂಗ್ ಅವರು ಎರಡನೇ ಸೆಟ್ ಹೋರಾಟದ ಆರಂಭದಲ್ಲಿ ಗಾಯದ ಸಮಸ್ಯೆಯಿಂದಾಗಿ ನಿವೃತ್ತಿ ಘೋಷಿಸುವುದರೊಂದಿಗೆ ಮುಂದಿನ ಹಾದಿ ಸರಳವಾಯಿತು.
ಆಟ ನಿಂತಾಗ ಭಾರತೀಯ ಆಟಗಾರ ಮೊದಲ ಸೆಟ್ ಅನ್ನು 6-2ರಿಂದ ಗೆದ್ದುಕೊಂಡು ಶುಭಾರಂಭ ಮಾಡಿದ್ದರು. ಆದರೆ, ಮೊದಲ ಸೆಟ್ ನಂತರ ಝಾಂಗ್ ಭುಜದ ನೋವಿನಿಂದಾಗಿ ಆಟ ಮುಂದುವರಿಸಲು ನಿರಾಕರಿಸಿ ಪಂದ್ಯ ತ್ಯಜಿಸಿದರು.
ಇದರೊಂದಿಗೆ ಸೋಮ್‌ದೇವ್ ಸತತ ಮೂರನೇ ಬಾರಿಗೆ ಟೂರ್ನಿಯೊಂದರಲ್ಲಿ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ. ಈ ಮುನ್ನ ಅವರು ಚೆನ್ನೈ ಮತ್ತು ಕೋಲ್ಕತಾ ಟೂರ್ನಿಗಳಲ್ಲಿ ಅಂತಿಮ ನಾಲ್ಕರಘಟ್ಟ ಪ್ರವೇಶಿಸಿದ್ದರು.  
ಅಂಕಿತಾ ರೈನಾಗೆ ಸೋಲು:
ಈ ನಡುವೆ ಅಂಕಿತಾ ರೈನಾ ಅವರು ಮಹಿಳೆಯರ ಐಟಿಎಫ್ ಟೆನಿಸ್ ಪಂದ್ಯಾವಳಿಯಲ್ಲಿ ಸೋಲಿನ ಕಹಿ ಅನುಭವಿಸಿದ್ದಾರೆ.
ಇಂದೇ ನಡೆದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತದ ನಂಬರ್ ಒನ್ ಆಟಗಾರ್ತಿ ಅಂಕಿತಾ, 3-6, 5-7 ನೇರ ಸೆಟ್‌ಗಳಿಂದ ಉಕ್ರೇನಿಲ ಯೂಲಿಯಾ ಬೇಗೆಲ್ಜಿಮರ್ ಎದುರು ಆಘಾತ ಅನುಭವಿಸಿದರು.ಎರಡು ಗಂಟೆ 5 ನಿಮಿಷಗಳ ಉತ್ತಮ ಪೈಪೋಟಿಯಲ್ಲಿ ಭಾರತೀಯ ಆಟಗಾರ್ತಿ ಎರಡನೇ ಸೆಟ್‌ನ ಒಂದು ಹಂತದಲ್ಲಿ ಎದುರಾಳಿಗೆ ತಿರುಗೇಟು ನೀಡುವ ಸೂಚನೆ ನೀಡಿದ್ದರು. ಆದರೆ, ಕೆಲ ಅನಗತ್ಯ ತಪ್ಪುಗಳನ್ನು ಮಾಡಿ ಅಂಕ ಕಳೆದುಕೊಂಡು ಅಂತಿಮವಾಗಿ ಟೂರ್ನಿಯಿಂದ ಹೊರನಡೆಯಬೇಕಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement