ಕ್ರಿಕೆಟ್‌ನಿಂದ ಓದಿನತ್ತ ಆರ್‌ಪಿ
ಲಖನೌ: ವೇಗದ ಬೌಲರ್ ಆರ್.ಪಿ ಸಿಂಗ್ ಅವರಿಗೆ ಈಗ ಪದವಿ ಪೂರ್ಣಗೊಳಿಸುವ ಆಸೆಯಂತೆ. ಹೀಗಾಗಿ ಅವರು ಈಗ ಮತ್ತೆ ಓದಿನತ್ತ ಗಮನಹರಿಸುತ್ತಿದ್ದಾರಂತೆ.
ಭಾರತ ತಂಡದಲ್ಲಿ ಸ್ಥಾನ ಸಿಕ್ಕಾಗ 2008-09ರಲ್ಲಿ ಲಖನೌ ವಿಶ್ವವಿದ್ಯಾಲಯದಲ್ಲಿ ಆರ್.ಪಿ ಸಿಂಗ್ ಅವರು ತಮ್ಮ ಪದವಿಯನ್ನು ಅರ್ಧ ಮಾಡಿದ್ದಾರಂತೆ. ಸಿಂಗ್ ಅವರು ಕಳೆದ ಶುಕ್ರವಾರ ಲಖನೌ ವಿಶ್ವವಿದ್ಯಾಲಯದ ಶಿಕ್ಷಕರ ಒಕ್ಕೂಟದ ಪದಾಧಿಕಾರಿಗಳನ್ನು ಭೇಟಿ ಮಾಡಿ, ತಮ್ಮ ಪದವಿಯನ್ನು ಪೂರ್ಣಗೊಳಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರಂತೆ.
ಸತತ ಗಾಯದಿಂದ ಫಿಟ್ನೆಸ್ ಕಳೆದುಕೊಂಡ ಹಿನ್ನೆಲೆಯಲ್ಲಿ ಆರ್.ಪಿ ಸಿಂಗ್ ಅವರು ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.