ಫುಟ್ಬಾಲ್ ವಿಶ್ವ ಕಪ್:23 ಲಕ್ಷ ಟಿಕೆಟ್ ಮಾರಾಟ
ಬ್ರಾಸಿಲಿಯಾ: ಬ್ರೆಜಿನಲ್ನಲ್ಲಿ ನಡೆಯಲಿರುವ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ 23 ಲಕ್ಷ ಟಿಕೆಟ್ಗಳನ್ನು ಈಗಾಗಲೇ ಅಭಿಮಾನಿಗಳು ಖರೀದಿಸಿದ್ದಾರಂತೆ. ಈ ವಾರ ಲಾಟರಿ ಶೈಲಿಯಲ್ಲಿ ಎರಡನೇ ಹಂತದಲ್ಲಿ ಮಾರಾಟವಾದ ಸಂದರ್ಭ ಈ ಸಂಖ್ಯೆ ದಾಖಲಾಗಿದೆ ಎಂದು ವಿಶ್ವ ಫುಟ್ಬಾಲ್ (ಫೀಫಾ) ಆಡಳಿತ ಮಂಡಳಿ ತಿಳಿಸಿದೆ.
ಕಳೆದ ವರ್ಷ ಆಗಸ್ಟ್ನಿಂದ ಮಾರಾಟ ಆರಂಭವಾದಾಗಿನಿಂದ, ಸುಮಾರು 228 ರಾಷ್ಟ್ರಗಳಿಂದ ಅಂದಾಜು ಒಂದು ಕೋಟಿ ಅಭಿಮಾನಿಗಳು ಟಿಕೆಟ್ಗಳಿಗಾಗಿ ಮನವಿ ಮಾಡಿದ್ದಾರಂತೆ.ಬ್ರೆಜಿಲ್ ಅಭಿಮಾನಿಗಳು 906,000 ಹೆಚ್ಚಿನ ಪ್ರಮಾಣದ ಟಿಕೆಟ್ ಪಡೆದಿದ್ದು, ನಂತರ ಅಮೆರಿಕಾ 125,000, ಕೊಲಂಬಿಯಾ 60,000, ಜರ್ಮನಿ 56,000 ಹಾಗೂ ಅರ್ಜೆಂಟೀನಾ ಅಭಿಮಾನಿಗಳು 54,000 ಟಿಕೆಟ್ ಖರೀದಿಸಿದ್ದಾರಂತೆ.
ಪಂದ್ಯಾವಳಿಯಲ್ಲಿ ನಡೆಯಲಿರುವ 64 ಪಂದ್ಯಗಳ ಪೈಕಿ 7 ಪಂದ್ಯಗಳ ಟಿಕೆಟ್ಗಳು ಈಗಾಗಲೇ ಮಾರಾಟವಾಗಿವೆಯಂತೆ.