ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬಾಂಗ್ಲಾ ಮೇಲೆ ಲಂಕಾ ಆಧಿಪತ್ಯ

Mainashree
Updated On : 22 Feb 2014, 10:55 am

ಮೀರ್‌ಪುರ: ಆರಂಭಿಕ ಕುಶಾಲ್ ಪೆರೇರಾ ಶತಕದ ನೆರವಿನಿಂದ ಶ್ರೀಲಂಕಾ ತಂಡ ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲೂ ಬಾಂಗ್ಲಾದೇಶ ವಿರುದ್ಧ 6 ವಿಕೆಟ್‌ಗಳಿಂದ ಜಯಗಳಿಸಿದೆ. ಇದರೊಂದಿಗೆ ಶ್ರೀಲಂಕಾ ಪಡೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಗೆಲವಿನೊಂದಿಗೆ ಕ್ಲೀನ್‌ಸ್ವೀಪ್ ಮಾಡಿಕೊಂಡಿದೆ.
ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 50 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 240 ರನ್‌ಗಳಿಸಿತು. ಬಾಂಗ್ಲಾ ಪರ ಮೊಮಿನುಲ್ ಹಕ್ ಅರ್ಧಶತಕಗಳಿಸಿದರು.
ಉತ್ತರವಾಗಿ ಶ್ರೀಲಂಕಾ ಇನ್ನೂ 15 ಎಸೆತಗಳು ಉಳಿದಿರುವಂತೆಯೇ 4 ವಿಕೆಟ್ ಕಳೆದುಕೊಂಡು 246 ರನ್‌ಗಳಿಸಿ ಸುಲಭ ಗೆಲವು ಪಡೆಯಿತು. ಪೆರೇರಾ 124 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ಸೇರಿದಂತೆ 106 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್:
ಬಾಂಗ್ಲಾದೇಶ 50 ಓವರುಗಳಲ್ಲಿ 8 ವಿಕೆಟ್‌ಗೆ 240 (ಮೊಮಿನುಲ್ ಹಕ್ 60, ನಾಸಿರ್ ಹುಸೇನ್ 38, ಧಮ್ಮಿಕಾ ಪ್ರಸಾದ್ 49ಕ್ಕೆ3, ಸುರಂಗ್ ಲಕ್ಮಲ್ 24ಕ್ಕೆ2). ಶ್ರೀಲಂಕಾ 47.3 ಓವರುಗಳಲ್ಲಿ 4 ವಿಕೆಟ್‌ಗೆ 246 (ಕುಶಾಲ್ ಪೆರೇರಾ 106, ದಿನೇಶ್ ಚಂಡಿಮಲ್ 64, ಮಹಮದುಲ್ಲಾ 38ಕ್ಕೆ2, ರುಬೇಲ್ ಹುಸೇನ್ 69ಕ್ಕೆ2).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement