ಸೋತ ಆಡ್ವಾಣಿ
ನವದೆಹಲಿ: ಭಾರತದ ಅಗ್ರ ಸ್ನೂಕರ್ ತಾರೆ ಪಂಕಜ್ ಆಡ್ವಾಣಿ ವೆಲ್ಷ್ ಓಪನ್ ಸ್ನೂಕರ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದಾರೆ. ಆಡ್ವಾಣಿ ಇಂಗ್ಲೆಂಡ್ನ ಜಾಯೆಲ್ ವಾಲ್ಕರ್ ವಿರುದ್ಧ 3-4 ಅಂಕಗಳಿಂದ ಪರಾಭವ ಹೊಂದಿದರು. ಪಂದ್ಯದಲ್ಲಿ ಎದುರಾಳಿಯನ್ನು ಸಮರ್ಥವಾಗಿ ನಿಯಂತ್ರಿಸುವಲ್ಲಿ ವೈಫಲ್ಯ ಕಂಡ ಆಡ್ವಾಣಿ, 00-87 (52), 105 (97)-00, 82-30, 01-65, 60-65, 68 (57)-46, 16-78 (55) ಅಂತರದಿಂದ ಕೈಚೆಲ್ಲಿದರು. ಈಗ ಆಡ್ವಾಣಿ ಅವರು ಈಗ ಮಾರ್ಚ್ 1ರಿಂದ 7ರವರೆಗೆ ಲಖನೌದಲ್ಲಿ ನಡೆಯಲಿರುವ ರಾಷ್ಟ್ರೀಯ ಹಿರಿಯರ ಸ್ನೂಕರ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲಿದ್ದಾರೆ. ನಂತರ ಮಾರ್ಚ್ 10ರಿಂದ 16ರವರೆಗೆ ನಡೆಯಲಿರುವ ಹೈಕೌ ಓಪನ್ನಲ್ಲಿ ಭಾಗವಹಿಸಲು ಆಡ್ವಾಣಿ ಚೀನಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.