ಹಾಲಿ ಪಟ್ಟ ಕಳಕೊಂಡ ಕಿರಿಯರು
ದುಬೈ: ಕೊನೆಯವರೆಗೂ ರೋಚಕತೆ ಉಳಿಸಿಕೊಂಡಿದ್ದ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಗೆಲ್ಲುವ ಸೌಭಾಗ್ಯವಿದ್ದರೆ, ಭಾರತಕ್ಕೆ ಸೋಲಿನ ಕಹಿಯೇ ಗತಿಯಾಯಿತು. ಇದರೊಂದಿಗೆ ಹಾಲಿ ಚಾಂಪಿಯನ್ ಎಂಬ ಹಣೆಪಟ್ಟಿ ಹೊಂದಿದ್ದ ಭಾರತ ಕಿರಿಯರು ಈ ಸಲದ ವಿಶ್ವಕಪ್ ಪಂದ್ಯಾವಳಿಯಲ್ಲಿ ಎಂಟರಘಟ್ಟದಲ್ಲೇ ಶಸ್ತ್ರ ಕೆಳಗಿಡುವಂತಾಗಿದೆ.
ದುಬೈನಲ್ಲಿ ಇಂದು ನಡೆದ ಪಂದ್ಯದಲ್ಲಿ ಇಂಗ್ಲೆಂಡ್ 3 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಭಾರತ ಒಡ್ಡಿದ 222 ರನ್‌ಗಳ ಗುರಿ ಬೆಂಬತ್ತಿದ ಇಂಗ್ಲೆಂಡ್ ಇನ್ನೂ 5 ಎಸೆತಗಳು ಉಳಿದಿರುವಂತೆಯೇ ದಡ ಸೇರಿ ಗೆಲವಿನ ಕೇಕೆ ಹಾಕಿತು.
ಮಧ್ಯಮ ಕ್ರಮಾಂಕದ ದಾಂಡಿಗರಾದ ಬೆನ್ ಡಕೆಟ್ (61ರನ್, 64 ಎಸೆತ, 7 ಬೌಂಡರಿ) ಮತ್ತು ಜೋ ಕ್ಲಾರ್ಕ್ (42ರನ್, 45 ಎಸೆತ, 6 ಬೌಂಡರಿ) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಒಂದು ಹಂತದಲ್ಲಿ ಭಾರತ ಕೇವಲ 148 ರನ್‌ಗಳಿಗೆ ಎದುರಾಳಿಯ 6 ವಿಕೆಟ್ ಉರುಳಿಸಿದಾಗ ಗೆಲ್ಲುವ ಉತ್ತಮ ಲಕ್ಷಣ ಹೊಂದಿತ್ತು. ಆದರೆ, ನಂತರದ ದಾಂಡಿಗರನ್ನು ಕಟ್ಟಿಹಾಕುವಲ್ಲಿ ವಿಫಲವಾಗಿ ಅಂತಿಮವಾಗಿ ಪ್ರಶಸ್ತಿಯ ಆಸೆ ಕೈಬಿಡಬೇಕಾಯಿತು. ಭಾರತದ ಪರ ಕುಲ್ದೀಪ್ ಯಾದವ್ 3 ವಿಕೆಟ್ ಪಡೆದಿದ್ದು, ಲಾಭದಾಯಕವಾಗಲಿಲ್ಲ.
ಕುಸಿದ ಭಾರತ ಚೇತರಿಕೆ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತದ ಸ್ಥಿತಿ ಆರಂಭದಲ್ಲೇ ಶೋಚನೀಯವಾಗಿತ್ತು. ಆದರೆ, ಕೆಳಕ್ರಮಾಂಕದಲ್ಲಿ ದೀಪಕ್ ಹೂಡಾ ಮತ್ತು ಸರ್ಫರಾಜ್ ಖಾನ್ ಆಕರ್ಷಕ ಅರ್ಧಶತಕ ಬಾರಿಸಿ ತಂಡಕ್ಕೆ ಭಾರಿ ಚೇತರಿಕೆ ನೀಡು ಮೂಲಕ ಅಂತಿಮವಾಗಿ ಭಾರತ 8 ವಿಕೆಟ್ ನಷ್ಟಕ್ಕೆ 221 ರನ್‌ಗಳ ಗೌರವ ಮೊತ್ತ ಸಂಪಾದಿಸಿತು.
ಭಾರತ ಕೇವಲ 24 ರನ್‌ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಭಾರಿ ಆಘಾತಕ್ಕೆ ಒಳಗಾಯಿತು. ಈ ಹಂತದಲ್ಲಿ ನಾಯಕ ವಿಜಯ್ ಜೋಲ್ ಮತ್ತು ದೀಪಕ್ ಹೂಡಾ ಐದನೇ ವಿಕೆಟ್ ಪಾಲುದಾರಿಕೆ ಆಟದಲ್ಲಿ 87 ರನ್‌ಗಳನ್ನು ಪೇರಿಸುವುದರೊಂದಿಗೆ ಮುಳುಗುತ್ತಿದ್ದ ತಂಡಕ್ಕೆ ಸ್ವಲ್ಪ ಆಸರೆ ಸಿಕ್ಕಂತಾಯಿತು.
ಆದರೆ ಜೋಲ್ (48 ರನ್, 85 ಎಸೆತ, 3 ಬೌಂಡರಿ) ಅರ್ಧಶತಕದ ಹೊಸ್ತಿಲಲ್ಲಿ ಪೆವಿಲಿಯಲ್ ಸೇರಿದರು. ಬಳಿಕ ಜೊತೆಯಾದ ಹೂಡಾ ಮತ್ತು (68ರನ್, 99 ಎಸೆತ, 6 ಬೌಂಡರಿ) ಮತ್ತು ಸರ್ಫರಾಜ್ ಖಾನ್ (ಅಜೇಯ 52, 46 ಎಸೆತ, 4 ಬೌಂಡರಿ) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮೊತ್ತ ದ್ವಿಶತಕದ ಗಡಿ ದಾಟಲು ಕಾರಣರಾದರು. ಇದಕ್ಕೂ ಮುನ್ನ ಹೂಡಾ ಮೂರು ಬಾರಿ ಹಾಗೂ ಜೋಲ್ ಒಂದು ಸಲ ಜೀವದಾನ ಪಡೆದಿದ್ದು ದೊಡ್ಡ ಲಾಭವನ್ನೇ ತಂದುಕೊಟ್ಟಿತು. ಇಂಗ್ಲೆಂಡ್ ಪರ ಮ್ಯಾಥ್ಯೂ ಫಿಶರ್ 3 ವಿಕೆಟ್ ಉರುಳಿಸಿದರು. ಅವರು ಹೆರ್ವಾಡ್ಕರ್ ಮತ್ತು ಸ್ಯಾಮ್ಸನ್‌ರನ್ನು ಔಟ್ ಮಾಡಿ ಹ್ಯಾಟ್ರಿಕ್ ಅವಕಾಶ ಹೊಂದಿದ್ದರು. ಆದರೆ, ರಿಕಿ ಭುಯಿ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ.
ಇಂದೇ ನಡೆದ ಇನ್ನಿತರ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಪಾಕಿಸ್ತಾನ 121 ರನ್‌ಗಳಿಂದ ಶ್ರೀಲಂಕಾವನ್ನು, ಬಾಂಗ್ಲಾದೇಶ 9 ವಿಕೆಟ್‌ಗಳಿಂದ ಕೆನಡಾವನ್ನು ಹಾಗೂ ಜಿಂಬಾಬ್ವೆ 6 ವಿಕೆಟ್‌ಗಳಿಂದ ನಮೀಬಿಯಾವನ್ನು ಸೋಲಿಸಿ ಸೆಮಿಫೈನಲ್ ತಲುಪಿದವು.
ಸ್ಕೋರ್ ವಿವರ
ಭಾರತ 50 ಓವರುಗಳಲ್ಲಿ 8 ವಿಕೆಟ್‌ಗೆ 221
ಅಂಕುಶ್ ಬೇನ್ಸ್ ಸಿ ಕ್ಲಾರ್ಕ್ ಬಿ ವಿನ್‌ಸ್ಲೇಡ್ 3
ಅಖಿಲ್ ಹೆರ್ವಾಡ್ಕರ್ ಸಿ ಕ್ಲಾರ್ಕ್ ಬಿ ಫಿಶರ್ 2
ವಿಜಯ್ ಜೋಲ್ ಸಿ ಡಕೆಟ್ ಬಿ ಸಯೇರ್ 48
ಸಂಜು ಸ್ಯಾಮ್ಸನ್ ಸಿ ಡಕೆಟ್ ಬಿ ಫಿಶರ್ 0
ರಿಕಿ ಭುಯಿ ಸಿ ಡಕೆಟ್ ಬಿ ಫಿಶರ್ 7
ದೀಪಕ್ ಹೂಡಾ ರನೌಟ್ 68
ಸರ್ಫರಾಜ್ ಖಾನ್ ಅಜೇಯ 52
ಆಮೀರ್ ಗನಿ ಸಿ ಸಯೇರ್ ಬಿ ಹಿಗ್ಗಿನ್ಸ್ 7
ಕುಲ್ದೀಪ್ ಯಾದವ್ ರನೌಟ್ 16
ಚಾಮ ಮಿಲಿಂದ್ ಅಜೇಯ 7
ಇತರೆ: (ಲೆಗ್‌ಬೈ-1, ವೈ-10) 11
ವಿಕೆಟ್ ಪತನ: 1-7, 2-8, 3-8, 4-24, 5-111, 6-147, 7-161, 8-196
ಬೌಲಿಂಗ್ ವಿವರ
ಮ್ಯಾಥ್ಯೂ ಫಿಶರ್ 10-1-55-3
ಜಾಕ್ ವಿನ್‌ಸ್ಲೇಡ್ 10-2-44-1
ರಾಬ್ ಸಯೇರ್10-0-27-1
ವಿಲ್ ರೋಡ್ಸ್ 10-0-35-0
ರಯಾನ್ ಹಿಗ್ಗಿನ್ಸ್ 4-0-21-1
ರಾಬ್ ಜೋನ್ಸ್ 6-0-38-0.
ಇಂಗ್ಲೆಂಡ್ 49.1 ಓವರುಗಳಲ್ಲಿ 7 ವಿಕೆಟ್‌ಗೆ 222
ಜೊನಾಥನ್ ಟಾಟ್ಟೆರ್‌ಸಾಲ್ ಸಿ ಅಂಡ್ ಬಿ ಹೂಡಾ 23
ಹ್ಯಾರಿ ಫಿಂಚ್ ಎಲ್‌ಬಿ ಮೋನುಕುಮಾರ್ 10
ರಯಾನ್ ಹಿಗ್ಗಿನ್ಸ್ ಸಿ ಸ್ಯಾಮ್ಸನ್ ಬಿ ಮಿಲಿಂದ್ 1
ಬೆನ್ ಡಕೆಟ್ ಸಿ ಜೋಲ್ ಬಿ ಕುಲ್ದೀಪ್ 61
ಎಡ್ ಬೆರ್ನಾರ್ಡ್ ಸಿ ಸ್ಯಾಮ್ಸನ್ ಬಿ ಗನಿ 24
ವಿಲ್ ರೋಡ್ಸ್ ಬಿ ಕುಲ್ದೀಪ್ 10
ಜೋ ಕ್ಲಾರ್ಕ್ ಸಿ ಜೋಲ್ ಬಿ ಕುಲ್ದೀಪ್ 42
ರಾಬ್ ಜೋನ್ಸ್ ಅಜೇಯ 28
ರಾಬ್ ಸಯೇರ್ ಅಜೇಯ 10
ಇತರೆ: (ವೈ-13) 13
ವಿಕೆಟ್ ಪತನ: 1-30, 2-36, 3-41, 4-117, 5-138, 6-148, 7-199.
ಬೌಲಿಂಗ್ ವಿವರ:
ಮಿಲಿಂದ್ 7.1-1-27-1
ಮೋನುಕುಮಾರ್ 5-0-21-1
ಹೂಡಾ 10-0-59-1
ಗನಿ 10-1-37-1
ಕುಲ್ದೀಪ್ ಯಾದವ್ 10-0-46-3
ಖಾನ್ 7-0-32-0