ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಜೋಲ್‌ಗೆ ನಿಷೇಧ, ಗನಿಗೆ ಎಚ್ಚರಿಕೆ

Mainashree
Updated On : 23 Feb 2014, 9:50 am

ದುಬೈ: ಭಾರತ ಕಿರಿಯರ ತಂಡದ ನಾಯಕ ವಿಜಯ್ ಜೋಲ್ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಅಸಭ್ಯವಾಗಿ ವರ್ತಿಸಿದ ಕಾರಣಕ್ಕೆ ಒಂದು ಪಂದ್ಯದ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದಾರೆ. ಅದೇ ರೀತಿ, ಭಾರತ ತಂಡದ ಮತ್ತೊಬ್ಬ ಆಟಗಾರ ಆಫ್ ಸ್ಪಿನ್ನರ್ ಆಮಿರ್ ಗನಿಗೆ ಎಚ್ಚರಿಕೆ ನೀಡಲಾಗಿದೆ.
ಎದುರಾಳಿ ಆಟಗಾರನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆಯಲ್ಲಿ ಜೋಲ್, ಐಸಿಸಿ ನೀತಿ ಸಂಹಿತೆಯ 2.2.8 ನೇ ಹಂತದ ತಪ್ಪೆಸಗಿದ್ದಾರೆ. ಹಾಗಾಗಿ, ಇದನ್ನು ಗಂಭೀರವಾಗಿ ಪರಿಗಣಿಸಿ ಅವರಿಗೆ ಒಂದು ಪಂದ್ಯದ ನಿಷೇಧದ ಶಿಕ್ಷೆಯನ್ನು ವಿಧಿಸಲಾಗಿದೆ.
ಇಂಗ್ಲೆಂಡ್ ವಿರುದ್ಧ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದ ವೇಳೆ ಕುಲ್ದೀಪ್ ಯಾದವ್ ಬೌಲ್ ಮಾಡಿದ 30ನೇ ಓವರ್‌ನಲ್ಲಿ ಎದುರಾಳಿ ಬ್ಯಾಟ್ಸ್‌ಮನ್ ಬೆನ್ ಡಕೆಟ್ ನೀಡಿದ್ದ ಕ್ಯಾಚ್ ಅನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದ ಜೋಲ್, ಕೆಟ್ಟ ಪದಗಳಿಂದ ಆತನನ್ನು ನಿಂದಿಸಿದ್ದರು.
ಶಿಕ್ಷೆಗೆ ಗುರಿಯಾಗಿರುವ ವಿಜಯ್ ಜೋಲ್, ಸೋಮವಾರ ಶ್ರೀಲಂಕಾ ವಿರುದ್ದ ನಡೆಯಲಿರುವ ಪ್ಲೇ-ಆಫ್ ಪಂದ್ಯದಿಂದ ಹೊರಗುಳಿಯಬೇಕಾಗಿದೆ.
ಅದೇ ರೀತಿ ಇಂದೇ ಪಂದ್ಯದಲ್ಲಿನ ಮತ್ತೊಂದು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮಿರ್ ಗನಿಗೆ ಎಚ್ಚರಿಕೆ ನೀಡಲಾಗಿದೆ. ಪಂದ್ಯದ 26ನೇ ಓವರಿನಲ್ಲಿ ಇಂಗ್ಲೆಂಡ್‌ನ ಎಡ್ ಬೆರ್ನಾರ್ಡ್ ಅವರು ಸಂಜು ಸ್ಯಾಮ್ಸನ್‌ಗೆ ಕ್ಯಾಚ್ ನೀಡಿದಾಗ ಗನಿ ಎದುರಾಳಿ ಆಟಗಾರನ ವಿರುದ್ಧ ಕೆಟ್ಟ ಪದಗಳ ಬಳಕೆ ಮಾಡಿದ್ದರು. ಇದಿರಿಂಗ ಗನಿ ಐಸಿಸಿ ನೀತಿ ಸಂಹಿತೆಯ 2.1.4ನೇ ಹಂತದ ಆಪಾದನೆ ಎಸಗಿದಂತಾಗಿತ್ತು.
ಐಸಿಸಿ ಪ್ರಾದೇಶಿಕ ರೆಫರಿ ಸಮಿತಿ ಗ್ರೇಮ್ ಲಾ ಬ್ರೂಯಿ ಅವರು ಈ ಇಬ್ಬರೂ ಆಟಗಾರರ ವಿರುದ್ಧ ಶಿಕ್ಷೆ ಪ್ರಮಾಣ ಘೋಷಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement