ಭಾರತಕ್ಕೆ 2ನೇ ಸ್ಥಾನ ಕಾಯ್ದುಕೊಳ್ಳುವ ಗುರಿ
ದುಬೈ: ಬಾಂಗ್ಲಾದೇಶದಲ್ಲಿ ಬರುವ ಮಂಗಳವಾರದಿಂದ ಆರಂಭವಾಗಲಿರುವ ಏಷ್ಯಾ ಕಪ್ನಲ್ಲಿ ತನ್ನ ಅಭಿಯಾನ ಆರಂಭಿಸಲಿರುವ ಭಾರತ ತಂಡ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ ಎರಡನೇ ಸ್ಥಾನ ಕಾಯ್ದುಕೊಳ್ಳುವ ಗುರಿ ಹೊಂದಿದೆ.
ಏಷ್ಯಾ ಕಪ್ನಲ್ಲಿ ಪಾಲ್ಗೊಳ್ಳಲಿರುವ ಐದು ತಂಡಗಳ ಪೈಕಿ ಭಾರತವೇ ಅಗ್ರಕ್ರಮಾಂಕದ ತಂಡವಾಗಿದೆ. ಸದ್ಯ ಟೀಂ ಇಂಡಿಯಾ ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ 115 ಅಂಕಗಳೊಂದಿಗೆ ಎರಡನೇ ಸ್ಥಾನದ ಗೌರವ ಹೊಂದಿದೆ.
ಭಾರತ ಹೊರತಾಗಿ ನಾಲ್ಕನೇ ಸ್ಥಾನದಲ್ಲಿರುವ ಶ್ರೀಲಂಕಾ, 6ನೇ ಕ್ರಮಾಂಕದಲ್ಲಿರುವ ಪಾಕಿಸ್ತಾನ, 9ರಲ್ಲಿರುವ ಬಾಂಗ್ಲಾದೇಶ ಹಾಗೂ ಯಾವುದೇ ಸ್ಥಾನ ಹೊಂದಿರದ ಅಫ್ಘಾನಿಸ್ತಾನ ಏಷ್ಯಾ ಕಪ್ನಲ್ಲಿ ಪಾಲ್ಗೊಳ್ಳಲಿರುವ ಉಳಿದ ನಾಲ್ಕು ತಂಡಗಳಾಗಿವೆ.ಏಪ್ರಿಲ್ 1ರ ನಿಗದಿತ ದಿನಾಂಕಕ್ಕೆ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಪಡೆಯುವ ತಂಡ 1,75,000 ಡಾಲರ್ ಬಹುಮಾನಕ್ಕೆ ಭಾಜನವಾಗಲಿದ್ದರೆ, ಎರಡನೇ ಸ್ಥಾನದ ತಂಡಕ್ಕೆ 75 ಸಾವಿರ ಡಾಲರ್ ಬಹುಮಾನ ಲಭಿಸಲಿದೆ.
ಈ ಮುನ್ನ ಭಾರತ ಸುಮಾರು ಒಂದು ವರ್ಷ ಕಾಲ ನಂಬರ್ ಸ್ಥಾನದಲ್ಲಿತ್ತು. ಆದರೆ, ತನಗಿಂತಲೂ ಕೆಳಕ್ರಮಾಂಕದಲ್ಲಿದ್ದ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 0-4ರಿಂದ ಸೋಲು ಕಾಣುವುದರೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ.