ಹುಬ್ಬಳ್ಳಿ ರೇಲ್ವೆಗೆ ರಾಯಲ್ ಟ್ರೋಫಿ
ಬೀದರ್: ಹುಬ್ಬಳ್ಳಿ ದಕ್ಷಿಣ ಪಶ್ಚಿಮ ರೇಲ್ವೆ ತಂಡ ಭರ್ಜರಿ ಬ್ಯಾಟಿಂಗ್ ಮೂಲಕ ಸೊಲ್ಲಾಪುರ ತಂಡವನ್ನು ಮಣಿಸಿ ಕೆಎಸ್ಸಿಎ ಸಹಯೋಗದಲ್ಲಿ ರಾಯಲ್ ಕ್ರಿಕೆಟ್ ಕ್ಲಬ್ ಆಯೋಜಿಸಿದ್ದ ಅಖಿಲ ಭಾರತ ಮಟ್ಟದ ರಾಯಲ್ ಟ್ರೋಫಿಯನ್ನು ಎರಡನೇ ಬಾರಿಗೆ ತನ್ನದಾಗಿಸಿಕೊಂಡಿದೆ.
ಕಳೆದ 2013ರ ರಾಯಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದ ಹುಬ್ಬಳ್ಳಿ ರೇಲ್ವೆ ತಂಡ ಭಾನುವಾರ ಬೆಳಗ್ಗೆ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಮಹಾರಾಷ್ಟ್ರದ ಸೊಲ್ಲಾಪುರ ತಂಡವನ್ನು 48.2 ಓವರ್ಗಳಲ್ಲಿ 246 ರನ್ಗಳಿಗೆ ಮಾತ್ರ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು.
ಸೊಲ್ಲಾಪುರ ತಂಡದ ನಿಖಿಲ್ ಮಹಾದಾಸ್ 73 ಎಸೆತಗಳಲ್ಲಿ 14 ಬೌಂಡರಿ, 2 ಸಿಕ್ಸರ್ಗಳೊಂದಿಗೆ ಶತಕ ಬಾರಿಸಿದರೆ, ಚೇತನ್ ನರಾಲ್ 52 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 50 ರನ್ ಗಳಿಸಿದರು.
ಹುಬ್ಬಳ್ಳಿ ರೇಲ್ವೆ ತಂಡದ ಪರವಾಗಿ ಶರದ್ ಬಾಬು 9.2 ಓವರ್ಗಳಲ್ಲಿ 31 ರನ್ ನೀಡಿ 5 ವಿಕೆಟ್ ಹಾಗೂ ಧನಂಜಯ್, ವಿನಾಯಕ ಗುಡಿ, ರಾಜದೇವ್ ಶುಕ್ಲಾ ಹಾಗೂ ಶಶಿಧರ್ ಸಿಂಧೆ ತಲಾ ಒಂದು ವಿಕೆಟ್ ಪಡೆದರು.ಧನಂಜಯ ಪರಾಕ್ರಮ: ನಂತರ ಬ್ಯಾಟಿಂಗ್ಗೆ ಇಳಿದ ಹುಬ್ಬಳ್ಳಿ ರೇಲ್ವೆ ತಂಡ 5 ಓವರ್ಗಳಲ್ಲಿ 29 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಧನಂಜಯ್ 60 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ಗಳ ಭರ್ಜರಿ ಬ್ಯಾಟಿಂಗ್ ಮೂಲಕ 86 ರನ್ಗಳನ್ನು ಗಳಿಸಿ ತಂಡವನ್ನು ಜಯದ ದಾರಿಯತ್ತ ತಂದರು.