ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫೈನಲ್ಗೆ ಪಾಕ್

Rashmi Kasaragodu
Updated On : 25 Feb 2014, 1:29 am

ಅಬುಧಾಬಿ: ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಪಾಕಿಸ್ತಾನ ತಂಡದ ಆಟಗಾರರು, 19 ವರ್ಷದೊಳಿಗಿನ ಕಿರಿಯರ ವಿಶ್ವಕಪ್ನ ಫೈನಲ್ಗೆ ಪ್ರವೇಶ ಪಡೆದಿದ್ದಾರೆ.
ಸೋಮವಾರ ದುಬೈ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು 3 ವಿಕೆಟ್ಗಳ ಅಂತರದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡ 50 ಓವರ್ಗಳಲ್ಲಿ 7 ವಿಕೆಟ್ಗೆ 204 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ 49.1 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 205 ರನ್ ದಾಖಲಿಸುವ ಮೂಲಕ ಗೆಲವಿನ ನಗೆ ಬೀರಿತು.
ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಇಂಗ್ಲೆಂಡ್ 1 ರನ್ಗೆ ತನ್ನ ಆರಂಭಿಕ ಆಟಗಾರರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ವಿಲ್ ರೊಡೆಸ್(ಅಜೇಯ 76) ಹಾಗೂ ರಯಾನ್ ಹಿಗ್ಗಿನ್ಸ್(52) ಅವರ ಜವಾಬ್ದಾರಿಯುತ ಬ್ಯಾಟಿಂಗ್ನಿಂದ 200ರ ಗಡಿ ದಾಟುವಲ್ಲಿ ಯಶಸ್ವಿಯಾಯಿತು.
ಇನ್ನು ಪಾಕಿಸ್ತಾನ ತಂಡ ಸೌದ್ ಶಕೀಲ್(45), ಜಾಫರ್ ಗೋಹರ್(ಅಜೇಯ 37), ಅಮೀರ್ ಅಂಜಾ(35) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಗೆಲವಿನ ದಡ ಸೇರಿತು.    
ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್ 50 ಓವರ್ಗಳಲ್ಲಿ 7 ವಿಕೆಟ್ಗೆ 204
ವಿಲ್ ರೊಡೆಸ್ ಅಜೇಯ 76, ರಯಾನ್ ಹಿಗ್ಗಿನ್ಸ್ 52, ಕರಮತ್ ಅಲಿ 36ಕ್ಕೆ2
ಪಾಕಿಸ್ತಾನ 49.1 ಓವರ್ಗಳಲ್ಲಿ 7 ವಿಕೆಟ್ಗೆ 205
ಸೌದ್ ಶಕೀಲ್ 45, ಜಾಫರ್ ಗೋಹರ್ ಅಜೇಯ 37, ಮ್ಯಾಥ್ಯೂ ಫಿಶರ್ 21ಕ್ಕೆ2

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement