ವಿಶ್ವಕಪ್ ತಯಾರಿಗಾಗಿ ನೆದರ್ಲೆಂಡ್ಗೆ ಭಾರತ
ರಾಂಚಿ: ಮುಂಬರುವ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಗೆ ಉತ್ತಮ ರೀತಿಯಲ್ಲಿ ಸಿದ್ಧತೆ ನಡೆಸಲು ಭಾರತ ಹಾಕಿ ತಂಡ ನೆದರ್ಲೆಂಡ್ಗೆ ಪ್ರಯಾಣ ಬೆಳೆಸಲಿದೆ. ವಿಶ್ವಕಪ್ ಪಂದ್ಯಾವಳಿಯು ಮೇ 31ರಿಂದ ಜೂ.15ರ ವರೆಗೆ ನೆದರ್ಲೆಂಡ್ನ ಹಾಗ್ಯಲ್ಲಿ ನಡೆಯಲಿದ್ದು, ಈ ನಗರದಲ್ಲೇ ಭಾರತ ತಂಡ ಅಭ್ಯಾಸ ನಡೆಸಲಿದೆ. ಹಾಗಾಗಿ ಭಾರತ ತಂಡ ಈಗಾಗಲೇ ಮಾ.13ರಿಂದ 23ರವರೆಗೆ ಮಲೇಷ್ಯಾದಲ್ಲಿ ನಡೆಯಲಿರುವ ಅಜ್ಲಾನ್ ಶಾ ಹಾಕಿ ಕಪ್ ಪಂದ್ಯಾವಳಿಯಿಂದ ದೂರವಿರಲುನಿರ್ಧರಿಸಿದೆ. ಭಾರತ ಹಾಕಿ ತಂಡ ಏ.11 ರಿಂದ 19ರ ವರೆಗೆ ದಿನಗಳ ಕಾಲ ನೆದರ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಈ ಪ್ರವಾಸದಲ್ಲಿ 5-6 ಪಂದ್ಯಗಳನ್ನಾಡಲಿದೆ ಎಂದು ಭಾರತ ಹಾಕಿಯ ಉನ್ನತ ಪ್ರದರ್ಶನ ನಿರ್ದೇಶಕ ರೋಯ್ಲೆಂಟ್ ಓಲ್ಟ್ಮನ್ಸ್ ತಿಳಿಸಿದ್ದಾರೆ. ಅಜ್ಲಾನ್ ಶಾ ಪಂದ್ಯಾವಳಿಯಿಂದ ದೂರ ಉಳಿದಿರುವುದು. ಅತ್ಯಂತ ಎಚ್ಚರಿಕೆಯ ನಿರ್ಧಾರ. ಇದರ ಬದಲು ತಂಡವನ್ನು ಯೂರೋಪ್ ಪ್ರವಾಸಕ್ಕೆ ಕಳುಯಿಸಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಎದುರಾಗಬಹುದಾದ ಸವಾಲುಗಳನ್ನು ಅರಿಯಲು ಉತ್ತಮ ಅವಕಾಶ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ.
ಅಲ್ಲದೆ ವಿಶ್ವಕಪ್ ಆಯೋಜಿಸುತ್ತಿರುವ ನೆದರ್ಲೆಂಡ್ನ ಹಾಗ್ನಲ್ಲೇ ತಂಡ ಅಭ್ಯಾಸ ಮಾಡವುದು ಎಲ್ಲಕ್ಕಿಂತ ಉತ್ತಮ ವೇದಿಕೆಯಾಗಲಿದೆ. ಈ ಪ್ರವಾಸದಲ್ಲಿ ನಾವು ಯೂರೋಪ್ನ ತಂಡಗಳಾದ ನೆದರ್ಲೆಂಡ್, ಬೆಲ್ಜಿಯಂ, ಜರ್ಮನಿ ಹಾಗೂ ಇತರೆ ಸ್ಥಳೀಯ ಎರಡು ಕ್ಲಬ್ಗಳ ವಿರುದ್ಧ ಪಂದ್ಯವನ್ನಾಡಲಿದೆ ಎಂದು ಓಲ್ಟ್ಮನ್ಸ್ ತಿಳಿಸಿದ್ದಾರೆ.