ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಎಎಫ್ಸಿ ಫುಟ್ಬಾಲ್ ಚರ್ಚಿಲ್ಗೆ ಸೋಲು

Rashmi Kasaragodu
Updated On : 26 Feb 2014, 12:55 pm

ಮಾರ್ಗೌ: ಗೋವಾದ ಚರ್ಚಿಲ್ ಬ್ರದರ್ಸ್ ತಂಡವು ಎಎಫ್ಸಿ ಫುಟ್ಬಾಲ್ ಕಪ್ ಪಂದ್ಯಾವಳಿಯಲ್ಲಿ ಇಂಡೋನೇಷ್ಯಾ ವಿರುದ್ಧ ಸೋಲನುಭವಿಸಿದೆ.
ಮಂಗಳವಾರ ಇಲ್ಲಿನ ಮಂಡಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಡೋನೇಷ್ಯಾ 2-0 ಗೋಲುಗಳ ಅಂತರದಲ್ಲಿ ಚರ್ಚಿಲ್ ತಂಡವನ್ನು ಮಣಿಸಿದೆ.
ಪಂದ್ಯದ ಮೊದಲಾರ್ಧದಲ್ಲಿ ಕುತೂಹಲದಿಂದ ಕೂಡಿದ ಪರಿಣಾಮ ಉಭಯ ತಂಡಗಳು ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಆದರೆ ಎರಡನೇ ಅವಧಿಯಲ್ಲಿ ಇಂಡೋನೇಷ್ಯಾದ ಪರ ಜೋಜ್ ಸೊಲೊಸ್ಸಾ ಹಾಗೂ ಯೊಹಾನೆಸ್ ಪಹಬೊಲ್ ಅವರ ಗೋಲಿನ ನೆರವಿನಿಂದ ಗೆಲವು ದಾಖಲಿಸಿತು.
ಚರ್ಚಿಲ್ ತಂಡ 83ನೇ ನಿಮಿಷದಲ್ಲಿ ಗೋಲು ದಾಖಲಿಸುವ ಅವಕಾಶ ಹೊಂದಿತ್ತಾದರೂ ಅದನ್ನು ಬಳಸಿಕೊಳ್ಳುವಲ್ಲಿ ವಿಫಲವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement