ಕೋಮಾದಿಂದ ಶುಮಾಕರ್ ಹೊರ ತರುವ ವಿಶ್ವಾಸ ಕೈಬಿಟ್ಟ ವೈದ್ಯರು
ಗ್ರೆನೊಬೆಲ್: ಸ್ಕೀಯಿಂಗ್ ಅಪಘಾತಕ್ಕೆ ಒಳಗಾಗಿ ಕಳೆದ ಎರಡು ತಿಂಗಳಿನಿಂದ ಕೋಮಾ ಸ್ಥಿತಿಯಲ್ಲಿರುವ ಫಾರ್ಮುಲಾ ಒನ್ ದಂತಕತೆ ಮೈಕಲ್ ಶುಮಾಕರ್, ಕೋಮಾ ಸ್ಥಿತಿಯಿಂದ ಹೊರ ಬರುವ ವಿಶ್ವಾಸವನ್ನು ವೈದ್ಯರು ಕೈಬಿಟ್ಟಿದ್ದಾರೆ ಎಂದು ವರದಿಗಳು ಬಂದಿವೆ.
ಜರ್ಮನಿ ಮೂಲದ ಮ್ಯಾಗಜೀನ್ ಪ್ರಕಾರ ಗ್ರೆನೊಬೆಲ್ನಲ್ಲಿರುವ ಯುನಿವರ್ಸಿಟಿ ಆಸ್ಪತ್ರೆ ವೈದ್ಯರು ಶುಮಾಕರ್ ಅವರನ್ನು ಕೋಮಾದಿಂದ ಹೊರ ತರಲು ಸಾಧ್ಯವಾಗಿರುವ ಎಲ್ಲಾ ಪ್ರಯತ್ನಗಳನ್ನು ನಡೆಸಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಅವರು ಶುಮಿ ಕೋಮಾದಿಂದ ಹೊರ ಬರುವ ವಿಶ್ವಾಸವನ್ನು ಕೈಬಿಟ್ಟಿದ್ದಾರೆ. ಮೂರು ವಾರಗಳ ಹಿಂದೆ ಶುಮಾಕರ್ ಅವರನ್ನು ಕೋಮಾದಿಂದ ಹೊರ ತರಲು ಅವರಿಗೆ ನೀಡುವ ಅನೆಸ್ತೆಟಿಕ್ನ ಡೋಸೆಜ್ ಅನ್ನು ಕಡಿಮೆ ಮಾಡಲಾಗಿದೆ ಎಂದು ಮೈದ್ಯರು ತಿಳಿಸಿದ್ದರು. ನಂತರ ಶುಮಾಕರ್ ಆರೋಗ್ಯ ಸ್ಥಿತಿಯ ಬಗ್ಗೆ ಇನ್ನು ಯಾವುದೇ ರೀತಿಯ ಅಧಿಕೃತ ಹೇಳಿಕೆಗಳು ಹೊರ ಬಂದಿಲ್ಲ. ಡಿ.29ರಂದು ಸ್ಕೀಯಿಂಗ್ ಅಪಘಾತದಿಂದ ತೀವ್ರ ಪ್ರಮಾಣದ ಪೆಟ್ಟು ತಿಂದಿದ್ದ ಶುಮಾಕರ್, ಕೋಮಾ ಸ್ಥಿತಿಯಲ್ಲೇ ಉಳಿದಿದ್ದಾರೆ.