ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕ್ಯುರೇಟರ್ಗೆ ಗಂಭೀರ್ ಬೆದರಿಕೆ

Rashmi Kasaragodu
Updated On : 26 Feb 2014, 12:54 pm

ನವದೆಹಲಿ: ಭಾರತದ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಪಿಚ್ ಕ್ಯುರೇಟರ್ಗೆ ಬೆದರಿಕೆ ಹಾಕಿದ್ದಾರೆ ಎಂದು ವರದಿಗಳು ಬಂದಿವೆ.
ನಾನು ಎಂದಿನಂತೆ ಸಿಬಂದಿಗೆ ಸೂಚನೆಗಳನ್ನು ನೀಡುತ್ತಿದ್ದೆ. ಆಗ ತಕ್ಷಣ ಮಧ್ಯ ಪ್ರವೇಶಿಸಿದ ಗೌತಮ್ ಗಂಭೀರ್, ನನ್ನ ಯಾವುದೇ ಸೂಚನೆಗಳನ್ನು ಪಾಲಿಸದಂತೆ ಸಿಬಂದಿಗಳಿಗೆ ಹೇಳಿದರು. ಆತ ನನ್ನ ಮೇಲೆ ಕೂಗಾಡಿದ ಅಲ್ಲದೆ ಬ್ಯಾಟ್ ತೋರಿಸಿ ಬೆದರಿಕೆ ಹಾಕಿದ ಎಂದು ಪಿಚ್ ಕ್ಯುರೇಟರ್ ಸುಂದರಮ್ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗಂಭೀರ್, ಈ ವರದಿಯಲ್ಲಿ ಯಾವುದೇ ಸತ್ಯವಿಲ್ಲ. ಸೋಮವಾರ ನಾನು ಸುಂದರಮ್ ಅವರನ್ನು ಭೇಟಿ ಮಾಡಿದ್ದು ನಿಜ. ಆದರೆ ಅಲ್ಲಿ ಅತಿರೇಕದ ಮಾತುಕತೆಗಳು ನಡೆದಿಲ್ಲ. ದೆಲ್ಲಿ ಕ್ರಿಕೆಟ್ ತಂಡದ ಹಿತೈಷಿಯಾಗಿ ತಂಡಕ್ಕೆ ನೆರವಾಗುವ ರೀತಿಯಲ್ಲಿ ಪಿಚ್ ತಯಾರಿಸುವಂತೆ ಸಲಹೆ ನೀಡಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ.
ಪಿಚ್ಗೆ ಸಂಬಂಧಿಸಿದ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯವಿರುವುದು ನಿಜ. ಆದರೆ ಅವರನ್ನು ನಾನು ಬೆದರಿಸಿದ್ದೇನೆ ಎಂಬುದು ಕೇವಲ ಕಲ್ಪನೆಯಾಗಿದೆ. ಇನ್ನು ಸುಂದರಮ್ ಅವರೆ ಮಾಧ್ಯಮಗಳಲ್ಲಿ ನಾನು ಅವರ ಕೆಲಸದ್ಲಿ ಮಧ್ಯ ಪ್ರವೇಶಿಸುತ್ತೇನೆ ಎಂದು ಬೆದರಿಸಿದ್ದರು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement