ಫಿಕ್ಸಿಂಗ್ ಸತ್ಯ, ತಿಮಿಂಗಿಲಗಳೇ ಇವೆ
ಮುಂಬೈ: ಹಣದ ಹೊಳೆ ಹರಿಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ನಡೆದಿದೆ ಎನ್ನಲಾಗಿರುವ ಫಿಕ್ಸಿಂಗ್ ಪ್ರಕರಣದ ಕುರಿತು ದಿನಕ್ಕೊಂದು ಮಾಹಿತಿಗಳು ಹೊರಬೀಳತೊಡಗಿವೆ.
ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಭಾರತದ ಕ್ರೀಡಾ ಮತ್ತು ರಾಜಕೀಯ ವಲಯದ ಉನ್ನತ ವ್ಯಕ್ತಿಗಳ ಹೆಸರನ್ನು ಹೇಳುವ ಮೂಲಕ ಸ್ಫೋಟಕ ಮಾಹಿತಿಯನ್ನು ಪ್ರಕರಣದಲ್ಲಿ ಸಿಲುಕಿಕೊಂಡಿರುವ ಬಾಲಿವುಡ್ ನಟ ವಿಂದು ದಾರಾ ಸಿಂಗ್ ಅವರು ಬಹಿರಂಗಪಡಿಸಿದ್ದಾರೆ.ಖಾಸಗಿ ಸುದ್ದಿವಾನಿಯೊಂದಕ್ಕೆ ವಿಶೇಷ ಸಂದರ್ಶನ ನೀಡಿದ ವಿಂದು, ವಿಜಯ್ ಮಲ್ಯ, ಐಸಿಸಿ ಮಾಜಿ ಅಧ್ಯಕ್ಷ ಮತ್ತು ಕೇಂದ್ರ ಕೃಷಿ ಸಚಿವ ಶರದ್ ಪವಾರ್, ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ, ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮತ್ತು ಐಪಿಎಲ್ ಫಿಕ್ಸಿಂಗ್ನಲ್ಲಿ ತಾವೂ ಭಾಗಿಯಾಗಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.
'ಪ್ರಕರಣದಲ್ಲಿ ನಾನೊಂದು ನಾನೊಂದು ಸಣ್ಣ ಮೀನು. ದೊಡ್ಡ ದೊಡ್ಡ ತಿಮಿಂಗಲುಗಳೇ ಪ್ರಕರಣದಲ್ಲಿ ಭಾಗಿಯಾಗಿವೆ. ಅಲ್ಲದೆ, ಇದೊಂದು ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಮತ್ತು ಶ್ರೀನಿವಾಸನ್ ಅವರನ್ನು ನಡುವಿನ ಹಗ್ಗ ಜಗ್ಗಾಟ. ಅಲ್ಲದೆ, ಶರದ್ ಪವಾರ್ ಅವರು ಲಲಿತ್ ಮೋದಿಯನ್ನು ಬೆಂಬಲಿಸುತ್ತಿದ್ದಾರೆ' ಎಂದಿದ್ದಾರೆ ವಿಂದು.
'ಲಲಿತ್ ಮೋದಿ ಅವರು ಶ್ರೀನಿವಾಸನ್ ಅವರನ್ನು ದೂರ ಇಡಲು ಯತ್ನಿಸುತ್ತಿದ್ದಾರೆ.
ಗುರುನಾಥ್ ಅವರು ಶ್ರೀನಿವಾಸನ್ ಅವರ ಅಳಿಯ. ಗುರುನಾಥ್ ವಿರುದ್ಧ ಯಾವುದೇ ರೀತಿಯ ಸಾಕ್ಷ್ಯಗಳನ್ನು ಒದಗಿಸಿದಲ್ಲಿ ಪ್ರಕರಣ ಹೊಸ ತಿರುವು ಪಡೆದುಕೊಳ್ಳುವ ಭೀತಿಯಲ್ಲಿದ್ದಾರೆ ಶ್ರೀನಿವಾಸನ್. ಕಾರಣ ಗುರುನಾಥ್ ಪ್ರಕರಣದಲ್ಲಿ ಸಂಪೂರ್ಣವಾಗಿ ಭಾಗಿಯಾಗಿದ್ದಾರೆ. ಅಲ್ಲದೆ ಐಪಿಎಲ್ ಪಂದ್ಯಾವಳಿ ಸಂಪೂರ್ಣವಾಗಿ ಶೇ. 100ರಷ್ಟು ಫಿಕ್ಸಿಂಗ್ ಪ್ರಕರಣದಿಂದ ಕೂಡಿದೆ. ಐಪಿಎಲ್ ತಂಡಗಳ ಮಾಲೀಕರಿಗೆ ಮಾತ್ರ ಫಿಕ್ಸಿಂಗ್ ಪ್ರಕರಣದ ಬಗ್ಗೆ ಸಂಪೂರ್ಣವಾಗಿ ಗೊತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕ ವಿಜಯ್ ಮಲ್ಯ ಅವರಿಗೂ ಎಲ್ಲವೂ ಗೊತ್ತಿದೆ. ಮಲ್ಯ ಅವರು ಸಹ ಬೆಟ್ಟಿಂಗ್ನಲ್ಲಿ ಭಾಗಿಯಾಗಿದ್ದು, 100ರಿಂದ 200 ಕೋಟಿ ಗಳಿಸಿತ್ತಿದ್ದಾರೆ' ಎನ್ನುವ ಹಲವಾರು ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ ದಾರಾ ಸಿಂಗ್.