ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫುಟ್ಬಾಲ್: ಮಾ.5ಕ್ಕೆ ಭಾರತ ಬಾಂಗ್ಲಾ ಸೌಹಾರ್ದ ಪಂದ್ಯ

Rashmi Kasaragodu
Updated On : 26 Feb 2014, 12:52 pm

ಮಾರ್ಗೌ: ಭಾರತ ಫುಟ್ಬಾಲ್ ತಂಡ ಮುಂದಿನ ತಿಂಗಳು ಬಾಂಗ್ಲಾದೇಶ ವಿರುದ್ಧ ಅಂತಾರಾಷ್ಟ್ರೀಯ ಸೌಹಾರ್ದಯುತ ಪಂದ್ಯಾವಳಿಯನ್ನು ಆಡಲಿದೆ.
ಮಂಗಳವಾರ ಈ ವಿಷಯವನ್ನು ಪ್ರಕಟಿಸಿದ ಭಾರತ ತಂಡದ ಮುಖ್ಯ ಕೋಚ್ ವಿಮ್ ಕೋವರ್ಮನ್ಸ್, ಫಟೋರ್ಡಾದ ಜವಹರ್ಲಾಲ್ ನೆಹರು ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಅಲ್ಲದೆ ಪಂದ್ಯಕ್ಕಾಗಿ ಆಯ್ಕೆಯಾಗಿರುವ 20 ಆಟಗಾರರ ತಂಡವನ್ನು ಪ್ರಕಟಿಸಿದ್ದಾರೆ.
ಪುಣೆ ಎಫ್ಸಿ ತಂಡದ ಗೋಲ್ಕೀಪರ್ ಅಮ್ರಿಂದರ್ ಸಿಂಗ್, ಚರ್ಚಿಲ್ ಬ್ರದರ್ಸ್ನ ಸ್ಟ್ರೈಕರ್ ಬಲ್ವಂತ್ ಸಿಂಗ್ ತಂಡಕ್ಕೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ನಂಬರ್ ಒನ್ ಕೀಪರ್ ಸುಬ್ರತಾ ಪಾಲ್, ಮುಂಬೈ ಎಫ್ಸಿ ತಂಡದ ಡಿಫೆಂಡರ್ ಸಂದೇಶ್ ಝಿಂಗನ್ ಮತ್ತು ಡೆಂಪೊ ಎಫ್ಸಿನ ಆಲ್ವಿನ್ ಜಾರ್ಜ್ ತಂಡಕ್ಕೆ ಮರಳಿದ್ದಾರೆ. ಮಾ.1ರಂದು ಗೋವಾದಲ್ಲಿ ತಂಡದ ಎಲ್ಲಾ ಆಟಗಾರರು ಸೇರಲಿದ್ದಾರೆ.
ಭಾರತ ತಂಡ
ಗೋಲ್ಕೀಪರ್: ಕರಣ್ಜಿತ್ ಸಿಂಗ್, ಅಮ್ರಿಂದರ್ ಸಿಂಗ್, ಸುಬ್ರತಾ ಪೌಲ್
ಡಿಫೆಂಡರ್: ಡೆಂಜಿಲ್ ಫ್ರ್ಯಾಂಕೊ, ಅರ್ನಾಬ್ ಮೊಂದಲ್, ಐಬೊರ್ಲಾಂಗ್ ಖೊಂಗ್ಜಿ, ಸಂದೇಶ್ ಝಿಂಗನ್, ಗುರ್ಜಿಂದರ್ ಕುಮಾರ್, ನಾರಾಯಣ್ ದಾಸ್
ಮಿಡ್ಫೀಲ್ಡರ್: ಮೆಹ್ತಾಬ್ ಹೊಸೈನ್, ಲಾಲ್ರಿಂದಿಕಾ ರಾಲ್ಟೆ, ಲೆನ್ನಿ ರೊಡ್ರಿಗಸ್, ರಾಕಸ್ ಲಮರೆ, ಆಲ್ವಿನ್ ಜಾರ್ಜ್, ಕ್ಲಿಫೋರ್ಡ್ ಮಿರಾಂಡಾ, ಫ್ರಾಂನ್ಸಿಸ್ ಫರ್ನಾಂಡೆಸ್, ವಿಕ್ಟೋರಿನೊ ಫರ್ನಾಂಡೀಸ್.
ಫಾರ್ವರ್ಡ್ಸ್: ಸುನಿಲ್ ಛೆಟ್ರಿ, ರಾಬಿನ್ ಸಿಂಗ್, ಬಲ್ವಂತ್ ಸಿಂಗ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement