ಕ್ವಾರ್ಟರ್‌ಗೆ ಅರವಿಂದ್
ಮುಲ್ಹೆಮ್ ಆನ್ ಡರ್ ರುಹ್(ಜರ್ಮನಿ): ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿರುವ ಅರವಿಂದ್ ಭಟ್ ಜರ್ಮನ್ ಓಪನ್ ಗ್ರ್ಯಾನ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಅರವಿಂದ್ ತಮ್ಮ ಎದುರಾಳಿ ಮಲೇಷ್ಯಾದ ಡಾರೆನ್ ಲೀವ್ ವಿರುದ್ಧ 21-14, 21-12 ನೇರ ಸೆಟ್‌ಗಳ ಗೆಲವು ದಾಖಲಿಸಿದ್ದಾರೆ. ಅರವಿಂದ್ ಅವರು ತಮ್ಮ ಮುಂದಿನ ಪಂದ್ಯದಲ್ಲಿ ಕೆಂಟೊ ಮೊಮೊಟ ಹಾಗೂ ವಿಕ್ಟೋರ್ ಅಕ್ಸೆಲ್‌ಸೆನ್ ನಡುವಣ ಮೂರನೇ ಸುತ್ತಿನ ಪಂದ್ಯದಲ್ಲಿ ಜಯ ಗಳಿಸುವವರ ವಿರುದ್ಧ ಸೆಣೆಸಾಡಲಿದ್ದಾರೆ. ಭಾರತದ ಮತ್ತೊಬ್ಬ ಆಟಗಾರ ಆನಂದ್ ಪವಾರ್ ಚೈನೀಸ್ ತೈಪೆನ ಚೆನ್ ಚೌ ವಿರುದ್ಧ 21-14, 21-12 ನೇರ ಸೆಟ್‌ಗಳ ಪರಾಭವಗೊಂಡಿದ್ದಾರೆ.
ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅರುಂಧತಿ ಪಂತ್ವಾನೆ ತಮ್ಮ ಎದುರಾಳಿ ಜಪಾನ್‌ನ ಎರಿಕೊ ಹಿರೊಸ್ ವಿರುದ್ಧ 18-21, 16-21 ನೇರ ಸೆಟ್‌ಗಳಿಂದ ಪರಾಭವಗೊಂಡಿದ್ದಾರೆ.