ಬಿಪಿಎಲ್ ವೇಳೆ ಬುಕ್ಕಿ ಸಂಪರ್ಕಿಸಿದ್ದ
ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಲೂ ವಿನ್ಸೆಂಟ್ ತಮಗೆ ಬುಕ್ಕಿಗಳು ಸಂಪರ್ಕಿಸಿದ್ದನ್ನು ಸಂಬಂಧಪಟ್ಟ ಅಧಿಕಾರಿಗೆ ವರದಿ ಮಾಡಿರಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ ತಾವು ಯಾವುದೇ ರೀತಿಯ ತಪ್ಪನ್ನು ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಾಂಗ್ಲಾದೇಶದಲ್ಲಿ ನಡೆದ ಬಿಪಿಎಲ್ ಪಂದ್ಯವೊಂದರ ವೇಳೆ ಬುಕ್ಕಿಗಳು ಪಂದ್ಯವನ್ನು ಫಿಕ್ಸಿಂಗ್ ಮಾಡಲು ಸಂಪರ್ಕಿಸಿದ್ದರು. ಆದರೆ ಅವರೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿರಲಿಲ್ಲ. ಬುಕ್ಕಿ ನೀಡಿದ ಅವಕಾಶವನ್ನು ನಿರಾಕರಿಸಿದ್ದೆ. ಆನಂತರ ನಾನು ಯಾವುದೇ ಪಂದ್ಯಗಳ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಐಸಿಸಿಯ ಭ್ರಷ್ಟಾಚಾರ ನಿಗ್ರಹ ಕಾಯ್ದೆಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಈ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಲಾಗುವುದು. ಐಸಿಸಿಯ ತನಿಖೆಯಲ್ಲಿ ವಿನ್ಸೆಂಟ್ ಅವರ ವಿಚಾರಣೆ ನಡೆದಿದೆ. ಮುಂದಿನ ತನಿಖೆಗೆ ನೆರವು ನೀಡಲಾಗುವುದು ಎಂದು ನ್ಯೂಜಿಲೆಂಡ್ ಸಂಸ್ಥೆಯ ಮುಖ್ಯ ಕಾರ್ಯನಿವಕ ಅಧಿಕಾರಿ ಡೇವಿಡ್ ವೈಟ್ ತಿಳಿಸಿದ್ದಾರೆ.