ಶರ್ಮಿಳಾಗೆ ಋತುವಿನ ಪ್ರಥಮ ಪ್ರಶಸ್ತಿ
ಮುಂಬೈ: ಬೆಂಗಳೂರಿನ ಮಹಿಳಾ ಗಾಲ್ಫ್ ತಾರೆ ಶರ್ಮಿಳಾ ನಿಕೋಲೆಟ್ ಅವರು ಋತುವಿನ ಮೊದಲ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮುಂಬೈ ಪ್ರೆಸಿಡೆನ್ಸಿ ಗಾಲ್ಫ್ ಕ್ಲಬ್‌ನಲ್ಲಿ ನಡೆದ ಹೀರೋ ಮಹಿಳಾ ವೃತ್ತಿಪರ ಟೂರ್ 4ನೇ ಹಂತದ ಪಂದ್ಯಾವಳಿಯಲ್ಲಿ ಶರ್ಮಿಳಾ ಗುರುವಾರ ಈ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಪಂದ್ಯಾಳಿಯ ಅಂತಿಮ ದಿನ ದೆಹಲಿ ಗಾಲ್ಫ್ ತಾರೆ ವಾಣಿ ಕಪೂರ್ ವಿರುದ್ಧ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದ ಶರ್ಮಿಳಾ ಪ್ರಶಸ್ತಿಗೆ ಭಾಜನರಾದರು. ಪಂದ್ಯಾವಳಿಯೂದ್ದಕ್ಕೂ ಗಮನ ಸೆಳೆಯುವ ಪ್ರದರ್ಶನ ನೀಡಿದ ಶರ್ಮಿಳಾ, ಈ ವರ್ಷ ನಡೆಯಲಿರುವ 14 ಪಂದ್ಯಗಳ ಸರಣಿಯ 4ನೇ ಹಂತದಲ್ಲಿ ರು. 5,00,000 ಬಹುಮಾನವನ್ನು ತಮ್ಮದಾಗಿಸಿಕೊಂಡರು.