ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕಿರಿಯರ ವಿಶ್ವಕಪ್: ಆಂಗ್ಲರಿಗೆ ತೃತೀಯ ಸ್ಥಾನ

Mainashree
Updated On : 28 Feb 2014, 10:23 am

ಅಬುಧಾಬಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಬೆನ್ ಡಕ್ಕೆಟ್(100) ಅವರ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ 19 ವರ್ಷದೊಳಗಿನ ಕಿರಿಯರ ವಿಶ್ವಕಪ್ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದಿದೆ. ಶುಕ್ರವಾರ ಇಲ್ಲಿನ ಐಸಿಸಿ ಅಕಾಡೆಮಿ ಕ್ರೀಡಾಂಗಣದಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ 1 ವಿಕೆಟ್ ಗೆಲವು ದಾಖಲಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 246 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಆಂಗ್ಲರ ಪಡೆ 49.4 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 247 ರನ್ ದಾಖಲಿಸಿ ಗೆಲವಿನ ನಗೆ ಬೀರಿತು. ಆಸ್ಟ್ರೇಲಿಯಾ ತಂಡದ ಪರ ಮೆಕ್ ಡೆರ್ಮೊಟ್ ಅಜೇಯ 56 ರನ್ ದಾಖಲಿಸಿದ್ದು ತಂಡದ ಪರ ಗರಿಷಅಠ ಮೊತ್ತವಾಗಿತ್ತು. ಅಲ್ಲದೆ ಆರಂಭಿಕ ಮ್ಯಾಥ್ಯೂ ಶಾರ್ಟ್ 41, ಥಾಮಸ್ ಆ್ಯಂಡ್ರೂಸ್ 40 ರನ್ ಗಳಿಸಿದ್ದು ತಂಡ 250ರ ಸಮೀಪಕ್ಕೆ ಸಾಗುವಂತೆ ಮಾಡಿತು.  ಇನ್ನು ಇಂಗ್ಲೆಂಡ್ ತಂಡ ಆರಂಭದಲ್ಲೇ ಆಗ್ರ ಮೂವರು ಆಟಗಾರರನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, ಆಧಾರವಾಗಿ ನಿಂತ ಬೆನ್ ಡಕ್ಕೆಟ್ ಶತಕ ದಾಖಲಿಸಿ ತಂಡವನ್ನು ಗೆಲವಿನ ದಡ ಸೇರಿಸಿದರು. 109 ಎಸೆತಗಳನ್ನು ಎದುರಿಸಿದ ಡಕ್ಕೆಟ್ 9 ಬೌಂಡರಿಗಳನ್ನು ಬಾರಿಸಿ 100 ರನ್ ದಾಖಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement