ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಜಿದಾನೆ ಪುತ್ರ ಆಡಲು ಬಂದ!

Lingaraj Badiger
Updated On : 28 Feb 2014, 4:31 am

2006ರ ಫುಟ್ಬಾಲ್ ವಿಶ್ವಕಪ್‌ನ ಫೈನಲ್‌ನಲ್ಲಿ ಫ್ರಾನ್ಸ್ ತಂಡದ ಜಿನೆದಿನೆ ಜಿದಾನೆ, ಎದುರಾಳಿ ಇಟಲಿ ತಂಡದ ಮಾರ್ಕೊ ಮೆಟೆರ್ಜಿ ಅವರನ್ನು ತಲೆಯಿಂದ ಗುದ್ದಿ ಉರುಳಿಸಿ ಸುದ್ದಿಯಾಗಿದ್ದು, ಘಟನೆಯ ನೆನಪಿಗಾಗಿ ಪ್ಯಾರಿಸ್‌ನ ಹೃದಯ ಭಾಗದಲ್ಲಿ ಅವರ ಕಂಚಿನ ಪ್ರತಿಮೆಯನ್ನು ರಚಿಸಿರುವುದು ಹಳೇ ಸುದ್ದಿ.

ಈಗ ಯುವ ಫುಟ್ಬಾಲ್‌ನಲ್ಲಿ ಮಿಂಚುತ್ತಿರುವ ಜಿನೆದಿನೆ ಜಿದಾನೆ ಪುತ್ರ, ಫುಟ್ಬಾಲ್ ಜಗತ್ತಿನ ಶ್ರೇಷ್ಠ ಆಟಗಾರರಲ್ಲೊಬ್ಬರಾದ ತಮ್ಮ ತಂದೆಯ ಹಾದಿಯನ್ನೇ ತುಳಿದಿದ್ದಾರೆ. ಕಾರಣ, ಸ್ಪೇನ್ ಮತ್ತು ಫ್ರಾನ್ಸ್‌ನ ದ್ವಿನಾಗರಿಕತ್ವ ಹೊಂದಿರುವ ಜಿದಾನೆ ಪುತ್ರ ಎಂಜೋ ಜಿದಾನೆ ಫ್ರಾನ್ಸ್ ಪರ ಆಡಲು ತೀರ್ಮಾನಿಸಿರುವುದು ಈಗ ಹರ್ಷದ ಸುದ್ದಿ.

ಸ್ಪೇನ್‌ನ ರಿಯಲ್ ಮ್ಯಾಡ್ರಿಡ್ ಎ ತಂಡದ ಪರ ಆಡುತ್ತಿರುವ ಎಂಜೋ ಜಿದಾನೆ ತಮ್ಮ ತಂದೆ ಮಿಡ್‌ಫೀಲ್ಡರ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ರಾಷ್ಟ್ರವನ್ನೇ ತಮ್ಮ ವೃತ್ತಿಯನ್ನು ರೂಪಿಸಿಕೊಳ್ಳಲು ಆಯ್ಕೆಮಾಡಿಕೊಂಡಿದ್ದಾರೆ.
ಹೀಗಾಗಿ ಈಗ ಎಂಜೋ ಅವರು ಫ್ರಾನ್ಸ್‌ನ 19 ವರ್ಷದೊಳಗಿನ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲಿದ್ದಾರೆ.

'ನನ್ನ ಪುತ್ರ ಯಾವ ರಾಷ್ಟ್ರದ ತಂಡವನ್ನು ಆಯ್ಕೆಮಾಡಿಕೊಳ್ಳುತ್ತಾನೆ ಎಂಬ ಬಗ್ಗೆ ನನಗೆ ಆತಂಕವಿಲ್ಲ. ಅದು ಆಟಗಾರನೊಬ್ಬನ ಆಯ್ಕೆ. ಭವಿಷ್ಯದಲ್ಲಿ ಆತ ತನ್ನ ನಿರ್ಧಾರವನ್ನು ಬದಲಿಸಬಹುದು' ಎಂದು ಜಿನೆದಿನೆ ಜಿದಾನೆ ಅಭಿಪ್ರಾಯಪಟ್ಟಿದ್ದಾರೆ. ಎಂಜೋ ಫ್ರಾನ್ಸ್‌ನಲ್ಲಿ ಜನಿಸಿದ ನಂತರ ಸ್ಪೇನ್‌ಗೆ ವಾಸಸ್ಥಾನ ಬದಲಿಸಿಕೊಂಡರು. ಹೀಗಾಗಿ ಎರಡೂ ರಾಷ್ಟ್ರಗಳ ನಾಗರಿಕತ್ವ ಸಿಕ್ಕಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement