ಬಾಸ್ಕೆಟ್ಬಾಲ್: ರಾಜ್ಯಕ್ಕೆ ಗೆಲವು
ನವದೆಹಲಿ: ಉತ್ತಮ ಪ್ರದರ್ಶನ ಮುಂದುವರಿಸಿರುವ ಕರ್ನಾಟಕ ತಂಡದ ಆಟಗಾರರು 64ನೇ ರಾಷ್ಟ್ರೀಯ ಬಾಸ್ಕೆಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಗೆಲವು ದಾಖಲಿಸಿದೆ.
ಗುರುವಾರ ಇಲ್ಲಿನ ತ್ಯಾಗರಾಜ ಕ್ರೀಡಾ ಸಂಕೀರ್ಣದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಕರ್ನಾಟಕ ತಂಡ 99-66 (26-14, 23-13, 25-21, 25-18) ಅಂಕಗಳ ಅಂತರದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಮಣಿಸಿದೆ.
ಕರ್ನಾಟಕ ತಂಡದ ಪರ ಅರವಿಂದ 22, ರಾಜೇಶ್ ಪಿ ಉಪ್ಪಾನ್ 18, ವಿಶು 18, ಅನಿಲ್ ಕುಮಾರ್ 14, ಸಂಜಯ್ ರಾಜ್ 11 ಅಂಕಗಳನ್ನು ದಾಖಲಿಸುವ ಮೂಲಕ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇನ್ನು ಜಮ್ಮು ಮತ್ತು ಕಾಶ್ಮೀರಪರ ಇಕ್ಬಾಲ್ ಸಿಂಗ್ 20, ರಣಿವ್ ಸಿಂಗ್ 13, ಕರಣ್ ಕುಮಾರ್ 12, ಶುಭಂ ಶರ್ಮಾ 12 ಅಂಕಗಳಿಸಿದರು.