ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಇಟಾಲೋ ಸ್ಕೇಟಿಂಗ್

ಕೈ ಮತ್ತು ಕಾಲುಗಳು ಸರಿಯಾಗಿದ್ದವರೇ ಸ್ಕೇಟಿಂಗ್‌ನಲ್ಲಿ ನಿಯಂತ್ರಣ ಸಾಧಿಸುವುದು ಕಷ್ಟ. ತನ್ನ ಎರಡೂ ಕಾಲು ಕಳೆದುಕೊಂಡ...

Rashmi Kasaragodu
Updated On : 17 Jan 2014, 4:01 am

ಕೈ ಮತ್ತು ಕಾಲುಗಳು ಸರಿಯಾಗಿದ್ದವರೇ ಸ್ಕೇಟಿಂಗ್‌ನಲ್ಲಿ ನಿಯಂತ್ರಣ ಸಾಧಿಸುವುದು ಕಷ್ಟ. ತನ್ನ ಎರಡೂ ಕಾಲು ಕಳೆದುಕೊಂಡ ಬ್ರೆಜಿಲ್‌ನ 26 ವರ್ಷದ ಯುವಕ ಇಟಾಲೋ  ಸ್ಕೇಟಿಂಗ್ ಬೋರ್ಡ್‌ನ್ನು ಕೈಯಿಂದ ತಿರುಗಿಸುತ್ತ ಜಂಪ್ ಮಾಡುವುದನ್ನು ನೋಡಿದರೆ, ನಾವು ಕನಸು ಕಾಣುತ್ತಿದ್ದೇವೆನೋ ಎಂಬ ಭಾವ ಆವರಿಸುತ್ತದೆ. ಅವನದು ಅಷ್ಟೊಂದು ಚಮತ್ಕಾರದ ಪರಿಣಿತಿ.
ಅಪಘಾತದಲ್ಲಿ ಕಾಲು ಕಳೆದುಕೊಂಡ ಈತ ಸ್ಕೇಟಿಂಗ್‌ನಲ್ಲಿ ಭವಿಷ್ಯ ಕಾಣಬೇಕು ಎಂದು ಹಠತೊಟ್ಟು, ಸಾಗುತ್ತಿರುತ್ತಾನೆ. ಆದರೆ, ವಿಧಿಬರಹ ಬೇರೆಯೇ ಆಗಿರುತ್ತದೆ. ಕಾರಣ, ಒಂದು ದಿನ ರೈಲು ಅಪಘಾತದಲ್ಲಿ ಆತನ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡುಬಿಡುತ್ತಾನೆ. ಆದರೇನಂತೆ? ಛಲ ಬಿಡದ ಮಲ್ಲನಂತೆ ಕಾಲು ಕಳೆದುಕೊಂಡರೂ, ಸ್ಕೇಟಿಂಗ್ ಅಭ್ಯಾಸಕ್ಕಿಳಿಯುತ್ತಾನೆ. ಅದರಲ್ಲೇ ತಲ್ಲೀನನಾಗುತ್ತಾನೆ. ಈಗ ಕಾಲಿದ್ದವರು ಆತನ ಅಧ್ಭುತ ಪ್ರದರ್ಶನ ನೋಡಿ ಬೆರಗುಗೊಳ್ಳುತ್ತಿದ್ದಾರೆ.
ಅಗ್ರ ಸ್ಕೇಟರ್
ಕಾಲಿಲ್ಲದ ಈ ಸ್ಕೇಟರ್ ಕಂಡರೆ ಈಗ ಬ್ರೆಜಿಲ್‌ನ ರಾಷ್ಟ್ರೀಯ ಸ್ಕೇಟರ್‌ಗಳಿಗೇ ನಡುಕ ಹುಟ್ಟುತ್ತದೆಯಂತೆ. 2012ರಲ್ಲಿ ಫ್ಲೋರಿಡಾದಲ್ಲಿ ನಡೆದ ತಂಪಾ ಪ್ರೊ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಸಾಧನೆಯನ್ನೂ ಆತ ಮಾಡಿದ್ದಾನೆ. ಅಲ್ಲದೆ ಬ್ರೆಜಿಲ್‌ನಲ್ಲಿ ಅಗ್ರ ರೇಟಿಂಗ್ ಪಡೆದಿರುವ ಸ್ಕೇಟರ್‌ಗಳಲ್ಲಿ ಆತನೂ ಒಬ್ಬ. ಇನ್ನೂ ಎರಡೂ ಕಾಲುಗಳಿದ್ದಿದ್ದರೆ, ಆತನ ಸಾಧನೆ ಹೇಗಿರುತ್ತಿತ್ತೊ?
ಬಾಲ್ಯದಲ್ಲೇ ಪ್ರತಿಭೆ ತೋರಿದ್ದ
ಬಾಲ್ಯದಲ್ಲೇ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಸ್ಕೇಟಿಂಗ್‌ನಲ್ಲಿ ಅದ್ಭುತ ಪ್ರತಿಭೆ ಮೆರೆಯುತ್ತಿದ್ದ ಇಟಾಲೋ, ತನ್ನೊಂದಿಗೆ ಆಟಕ್ಕಿಳಿದವರಿಗೆ ಅಚ್ಚರಿ ಮೂಡುವಂತಹ ಪ್ರದರ್ಶನ ನೀಡುತ್ತಿದ್ದ. 13ರ ವಯಸ್ಸಿನಲ್ಲಿ ಆತನ ಅಪಾಯಕಾರಿಯಾದ ಸಾಹಸಗಳನ್ನು ನೋಡಿ ಎಲ್ಲ ನಿಬ್ಬೆರಗಾಗುತ್ತಿದ್ದರಂತೆ. ಅದನ್ನು ನೋಡಿ ಹೊಟ್ಟೆಕಿಚ್ಚುಪಟ್ಟೇ ಯಮ ಆತನ ಕಾಲುಗಳನ್ನು ಕಿತ್ತುಕೊಂಡನೇ ಎನ್ನುತ್ತಾರಂತೆ ಆತನ ಅಭಿಮಾನಿಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement