ಫಿಕ್ಸಿಂಗ್ ಒಪ್ಪಿದ ವಿನ್ಸೆಂಟ್‌ಗೆ ಆಜೀವ ನಿಷೇಧ
ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಕುರಿತು ತಪ್ಪೊಪ್ಪಿಕೊಂಡ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಲೂ...
ದುಬೈ: ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಕುರಿತು ತಪ್ಪೊಪ್ಪಿಕೊಂಡ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಲೂ ವಿನ್ಸೆಂಟ್ ಅವರ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಂಗಳವಾರ ಆಜೀವ ನಿಷೇಧ ಹೇರಿದೆ.
ವಿನ್ಸೆಂಟ್ ನ್ಯೂಜಿಲೆಂಡ್ ಪರ 23 ಟೆಸ್ಟ್ ಪಂದ್ಯಗಳು ಮತ್ತು 102 ಏಕದಿನ ಪಂದ್ಯಗಳನ್ನಾಡಿದ್ದಾರೆ. ಇಂಗ್ಲೆಂಡ್‌ನಲ್ಲಿ ಆಡಿದ ಪಂದ್ಯಗಳಿಗೆ ಹಣ ಪಡೆದಿದ್ದೇನೆ. ಅಲ್ಲದೆ ಭಾರತ ನಡೆಸುವ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಾವಳಿ ಸೇರಿದಂತೆ ಹಲವಾರು ವರ್ಷಗಳಿಂದ ಹಣ ಪಡೆದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. 2012 ಅಕ್ಟೋಬರ್ 15ರಂದು ಕೇಪ್‌ಟೌನ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಆಕ್ಲೆಂಡ್ ಏಸಸ್ ನಡುವೆ ನಡೆದ ಪಂದ್ಯದಲ್ಲಿ ವಿನ್ಸೆಂಟ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರಂತೆ.ಉಳಿದ ಕ್ರಿಕೆಟಿಗರಿಗೆ ಇದೊಂದು ಎಚ್ಚರಿಕೆ ಎಂದು ಐಸಿಸಿಐ ಸಿಇಒ ಡೇವ್ ರಿಚರ್ಡ್ಸ್‌ನ್ ಅವರು ಹೇಳಿದ್ದಾರೆ.
2011ರಲ್ಲಿ ಇಂಗ್ಲೆಂಡ್ ಸಸೆಕ್ಸ್ ತಂಡದ ಪರ ಆಡಿದಾಗ ಮತ್ತು ಕಳೆದ ವರ್ಷ ನಡೆದ ಬಾಂಗ್ಲಾದೇಶ ಪ್ರಿಮೀಯರ್ ಲೀಗ್‌ನಲ್ಲೂ ಹಣ ಪಡೆದಿರುವುದಾಗಿ ವಿನ್ಸೆಂಟ್ ಒಪ್ಪಿಕೊಂಡಿದ್ದಾರೆ.
ನನ್ನ ಹೆಸರು ಲೂ ವಿನ್ಸೆಂಟ್, ನಾನೊಬ್ಬ ವಂಚಕ. ನಾನು ಪ್ರೀತಿಸಿದ ಕ್ರೀಡೆಯಲ್ಲಿ ಫಿಕ್ಸ್ ಮಾಡಿಕೊಳ್ಳುವ ಮೂಲಕ ಹಣ ಪಡೆದು, ನನ್ನ ವೃತ್ತಿಗೆ ಕಳಂಕ ಬರುವಂತೆ ಮಾಡಿದ್ದೇನೆ. ಅಲ್ಲದೆ, ನನ್ನ ದೇಶಕ್ಕೆ, ಪ್ರತಿನಿಧಿಸಿದ ಕ್ರೀಡೆಗೆ ಹಾಗೂ ನನ್ನ ಆಪ್ತರಿಗೆ ಅವಮಾನ ಮಾಡಿದ್ದೇನೆ.
- ಲೂ ವಿನ್ಸೆಂಟ್,
ನ್ಯೂಜಿಲೆಂಡ್ ಆಟಗಾರ