ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಘೋಶಾಲ್‌ಗೆ 4ನೇ ಶ್ರೇಯಾಂಕ

Rashmi Kasaragodu
Updated On : 3 Jul 2014, 12:59 pm

ನವದೆಹಲಿ: ಇದೇ ತಿಂಗಳು ಆರಂಭವಾಗಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಸ್ಕ್ವಾಷ್ ಆಟಗಾರರಿಗೆ ಶ್ರೇಯಾಂಕ ನೀಡಲಾಗಿದ್ದು, ಭಾರತದ ಸೌರವ್ ಘೋಶಾಲ್ ನಾಲ್ಕನೇ ಹಾಗೂ ದೀಪಿಕಾ ಪಳ್ಳಿಕಲ್ ಆರನೇ ಶ್ರೇಯಾಂಕ ಪಡೆದಿದ್ದಾರೆ.
ಜುಲೈ 23ರಿಂದ ಗ್ಲಾಸ್ಕೊನಲ್ಲಿ ಆರಂಭವಾಗಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಕ್ವಾಷ್‌ನ ಐದು ವಿಭಾಗಗಳಾದ ಪುರುಷರ ಸಿಂಗಲ್ಸ್, ಪುರುಷರ ಡಬಲ್ಸ್, ಮಹಿಳೆಯರ ಸಿಂಗಲ್ಸ್, ಮಹಿಳೆಯರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾಗವಹಿಸುವ ಆಟಗಾರರಿಗೆ ಶ್ರೇಯಾಂಕ ನೀಡಲಾಗಿದೆ.      ಭಾರತದ ತಾರೆಗಳಾದ ಮಹಿಳೆಯ ಸಿಂಗಲ್ಸ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅಂತಾರಾಷ್ಟ್ರೀಯ ರ್ಯಾಂಕಿಂಗ್‌ನಲ್ಲಿ 10ನೇ ಸ್ಥಾನ ಪಡೆದರೆ, ಪುರುಷರ ಸಿಂಗಲ್ಸ್‌ನಲ್ಲಿ ಸೌರವ್ ಘೋಶಾಲ್ 16ನೇ ರ್ಯಾಂಕಿಂಗ್ ಪಡೆದಿದ್ದು, 21ನೇ ರ್ಯಾಂಕಿಂಗ್ ಪಡೆದಿರುವ ಹಿರಿಯ ಆಟಗಾರ್ತಿ ಜೋಷ್ನಾ ಚಿನ್ನಪ್ಪ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದು, ಭಾರತಕ್ಕೆ ಪದಕದ ನಿರೀಕ್ಷೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement