ಚಾಂಪಿಯನ್ ಮರ್ರೆ ಮನೆಗೆ
ಹಾಲಿ ಚಾಂಪಿಯನ್ ಇಂಗ್ಲೆಂಡ್‌ನ ಆ್ಯಂಡಿ ಮರ್ರೆ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ...
ಲಂಡನ್: ಹಾಲಿ ಚಾಂಪಿಯನ್ ಇಂಗ್ಲೆಂಡ್‌ನ ಆ್ಯಂಡಿ ಮರ್ರೆ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ತಮ್ಮ ಹೋರಾಟ ಅಂತ್ಯಗೊಳಿಸಿದ್ದು, ಪ್ರಶಸ್ತಿ ಉಳಿಸಿಕೊಳ್ಳುವ ಹಾದಿಯಲ್ಲಿ ಎಡವಿದ್ದಾರೆ.
ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಆ್ಯಂಡಿ ಮರ್ರೆ 1-6, 6-7 (4-7), 2-6 ನೇರ ಸೆಟ್‌ಗಳ ಅಂತರದಲ್ಲಿ ಬಲ್ಗೇರಿಯಾದ ಗ್ರಿಗೊರ್ ದಿಮಿತ್ರೋವ್ ವಿರುದ್ಧ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಪಂದ್ಯದ ಆರಂಭದಿಂದಲೇ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಲು ಹೆಣಗಾಡಿದ ಮರ್ರೆ, ಪಂದ್ಯದಲ್ಲಿ ಬೆಲೆತೆತ್ತಬೇಕಾಯಿತು. ಮೊದಲ ಸೆಟ್‌ನಲ್ಲಿ ಮರ್ರೆ ವಿರುದ್ಧ ಹಿಡಿತ ಸಾಧಿಸಿದ ದಿಮಿತ್ರೋವ್, ಆರಂಭಿಕ ಸೆಟ್‌ನಲ್ಲೇ 6-1 ಅಂತರದ ಭಾರೀ ಮುನ್ನಡೆ ಸಾಧಿಸಿದರು. ನಂತರ ಎರಡನೇ ಸೆಟ್‌ನಲ್ಲಿ ದಿಮಿತ್ರೋವ್, ಮರ್ರೆ ಅವರಿಂದ ಪ್ರತಿರೋಧ ಎದುರಿಸಿದರಾದರೂ 6-7 (4-7) ಅಂತರದ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಮೂರನೇ ಹಾಗೂ ಅಂತಿಮ ಸೆಟ್‌ನಲ್ಲೂ 6-2 ಅಂತರದ ಉತ್ತಮ ಮುನ್ನಡೆ ಪಡೆದ ದಿಮಿತ್ರೋವ್ ಗೆಲವಿನ ನಗೆ ಬೀರಿದರು.
ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ರೊಮೇನಿಯಾದ ಸಿಮೊನಾ ಹಾಲೆಪ್ 6-4, 6-0 ಅಂತರದಲ್ಲಿ ಸಬಿನೆ ಲಿಸಿಕಿ ವಿರುದ್ಧ ಗೆಲವು ದಾಖಲಿಸಿದರು. ಪಂದ್ಯದ ಯಾವುದೇ ಹಂತದಲ್ಲೂ ಲಿಸಿಕಿ ಪಂದ್ಯದಲ್ಲಿ ಚೇತರಿಸಿಕೊಳ್ಳಲು ಅವಕಾಶ ನೀಡದ ಹಾಲೆಪ್, ಪಂದ್ಯವನ್ನು ಸುಲಭವಾಗಿ ತಮ್ಮದಾಗಿಸಿಕೊಂಡರು. ಮತ್ತೊಂದು ಪಂದ್ಯದಲ್ಲಿ ಕೆನಡಾದ ಯುಗೇನಿ ಬುಚರ್ಡ್ 6-3, 6-4 ಸೆಟ್‌ಗಳ ಅಂತರದಲ್ಲಿ ಆ್ಯಂಗೆಲಿಕ್ ಕರ್ಬರ್ ವಿರುದ್ಧ ಗೆಲವು ದಾಖಲಿಸಿದ್ದಾರೆ.