ಯಶ್ ಚಾಂಪಿಯನ್
ಬೆಂಗಳೂರು: ಕಳೆದವಾರ ಹೈದರಾಬಾದ್ನಲ್ಲಿ ನಡೆಸಲಾದ ಜೆಕೆ ಟೈಯರ್ಸ್ ಎಫ್ಎಂಎಸ್ಸಿಐ ರೊಟ್ಯಾಕ್ಸ್ ಮ್ಯಾಕ್ಸ್ ನ್ಯಾಷನಲ್ ಕಾರ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಂಗಳೂರಿನ ಕುವರ ಯಶ್ ಆರಾಧ್ಯ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಜು.28 ಹಾಗೂ 29ರಂದು ನಡೆದ ಚಾಂಪಿಯನ್ಶಿಪ್ನಲ್ಲಿ ಕಡೇಯ ಸ್ಥಾನದಿಂದ ರೇಸ್ ಆರಂಭಿಸಿದ ಯಶ್, ಅತ್ಯುತ್ತಮ ಚಾಲನೆಯ ಮೂಲಕ ಅಗ್ರಸ್ಥಾನ ಪಡೆದಿದ್ದಾರೆ.
15 ಲ್ಯಾಪ್ಗಲ ರೇಸ್ನಲ್ಲಿ 12ನೇ ಸ್ಥಾನದಿಂದ ರೇಸ್ ಆರಂಭಿಸಿದ ಯಶ್, 8:39.008 ನಿಮಿಷದಲ್ಲಿ ರೇಸ್ ಮುಕ್ತಾಯಗೊಳಿಸುವ ಮೂಲಕ ಚಾಂಪಿಯನ್ ಆಗಿದ್ದಾರೆ.