ವಿದೇಶಿ ಕೋಚ್ ವ್ಯರ್ಥ:ಧನರಾಜ್ ಪಿಳ್ಳೈ
ರಾಜ್‌ಕೋಟ್: ಭಾರತ ತಂಡಕ್ಕೆ ವಿದೇಶಿ ಕೋಚ್‌ಗಳ ಆಯ್ಕೆ ಮಾಡುವುದರಿಂದ ಭಾರತೀಯ ಆಟಗಾರರಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದು ಭಾರತ ಹಾಕಿ ತಂಡದ ಮಾಜಿ ನಾಯಕ ಧನರಾಜ್ ಪಿಳ್ಳೈ ಅಭಿಪ್ರಾಯಪಟ್ಟಿದ್ದಾರೆ.
ವಿದೇಶಿ ಕೋಚ್‌ಗಳಿಗೆ ಭಾರತೀಯ ಆಟಗಾರರ ಶಕ್ತಿ ಹಾಗೂ ನ್ಯೂನ್ಯತೆಗಳ ಬಗ್ಗೆ ಅರಿವಿಲ್ಲದ ಹಿನ್ನೆಲೆಯಲ್ಲಿ ಭಾರತೀಯ ಹಾಕಿಯ ಗುಣಮಟ್ಟ ನೆಲಕಚ್ಚುತ್ತಿದೆ ಎಂದು ಗುಜರಾತ್ ಸರ್ಕಾರ ಆಯೋಜಿಸಿದ್ದ ಪ್ರತಿಭಾನ್ವೇಷಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಧನರಾಜ್ ಪಿಳ್ಳೈ ಅಭಿಪ್ರಾಯಪಟ್ಟಿದ್ದಾರೆ.
ನಾನು 2004ರಿಂದ ಭಾರತ ತಂಡಕ್ಕೆ ಭಾರತೀಯ ಕೋಚ್ ಅನ್ನು ನೇಮಕ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸುತ್ತಾ ಬಂದಿದ್ದೇನೆ. ಭಾರತೀಯ ಕೋಚ್ ಆಟಗಾರರಿಗೆ ಉತ್ತಮ ತರಬೇತಿ ನೀಡುವ ವಿಶ್ವಾಸವಿದೆ. ಆದರೆ ಅವರಿಗೆ ಹೊಂದಿಕೊಳ್ಳಲು ಸ್ವಲ್ಪ ಕಾಲಾವಕಾಶದ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಇನ್ನು ಹಾಕಿ ದಂತಕತೆ ಧ್ಯಾನ್ ಚಂದ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಬಗ್ಗೆ ಮಾತನಾಡಿದ ಪಿಳ್ಳೈ, ಭಾರತ ಸರ್ಕಾರ ಧ್ಯಾನ್ ಚಂದ್ ಅವರ ಹೆಸರನ್ನು ಮುಂದಿನ ಬಾರಿ ಪ್ರತಿಷ್ಠಿತ ಪ್ರಶಸ್ತಿಗೆ ಪರಿಗಣಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.