ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

'ಸಚಿನ್ ಯಾರು? ನನಗೆ ಗೊತ್ತಿಲ್ಲ'

ಸಚಿನ್ ತೆಂಡೂಲ್ಕರ್ ವಿಶ್ವ ಕ್ರಿಕೆಟ್ನ ದಂತಕತೆಯಾಗಿದ್ದು, ಕ್ರಿಕೆಟ್ ಸೇರಿದಂತೆ...

Rashmi Kasaragodu
Updated On : 3 Jul 2014, 12:26 pm

ಲಂಡನ್: ಸಚಿನ್ ತೆಂಡೂಲ್ಕರ್ ವಿಶ್ವ ಕ್ರಿಕೆಟ್ನ ದಂತಕತೆಯಾಗಿದ್ದು, ಕ್ರಿಕೆಟ್ ಸೇರಿದಂತೆ ಇತರ ಕ್ರೀಡೆಗಳ ಖ್ಯಾತನಾಮರೊಂದಿಗೆ ಸ್ನೇಹ ಹೊಂದಿದ್ದಾರೆ. ಆದರೆ ಕ್ರಿಕೆಟ್ ಹೆಚ್ಚು ಜನಪ್ರಿಯವಾಗದ ರಷ್ಯಾದಲ್ಲಿ ಆ ದೇಶದ ಖ್ಯಾತ  ಟೆನಿಸ್ ತಾರೆ ಮಾರಿಯಾ ಶರಪೋವಾಗೆ ಮಾತ್ರ ತನಗೆ ಸಚಿನ್ ಯಾರೆಂದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ವಿಂಬಲ್ಡನ್ ಟೂರ್ನಿಯನ್ನು ವೀಕ್ಷಿಸಲು ಆಗಮಿಸುವ ಹವ್ಯಾಸ ಹೊಂದಿದ್ದು, ಕಳೆದ ವಾರನಡೆದ ರಾಫೆಲ್ ನಡಾಲ್ ಪಂದ್ಯವನ್ನು, ಫುಟ್ಬಾಲ್ ತಾರೆ ಡೇವಿಡ್ ಬೆಕಂ, ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಆ್ಯಂಡ್ರೂ ಸ್ಟ್ರಾಸ್, ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ ಜತೆಗೆ ವೀಕ್ಷಿಸಿದ್ದರು.
ಡೇವಿಡ್ ಬೆಕಂ ಜತೆಗೆ ಸಚಿನ್ ತೆಂಡೂಲ್ಕರ್ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಸಂದರ್ಭದಲ್ಲಿ ನಿಮಗೆ ಸಚಿನ್ ಬಗ್ಗೆ ತಿಳಿದಿದಿಯೇ ಎಂಬ ಪ್ರಶ್ನೆಯನ್ನು ಕೇಳಿದಾಗ ಪ್ರತಿಕ್ರಿಯಿಸಿದ ಶರಪೋವಾ, 'ನನಗೆ ಅವರು ಯಾರೆಂದು ಗೊತ್ತಿಲ್ಲ' ಎಂದರು. ಡೇವಿಡ್ ಬೆಕಂ ಅವರನ್ನು ಈ ಹಿಂದೆ ಎರಡು ಬಾರಿ ಭೇಟಿ ಮಾಡಿದ್ದೇನೆ. ಅವರು ಉತ್ತಮ ವ್ಯಕ್ತಿಯಾಗಿದ್ದು, ಫುಟ್ಬಾಲ್ನಲ್ಲಿ ಸಾಕಷ್ಟು ಯಶಸ್ಸು ಸಾಧಿಸಿದ್ದಾರೆ ಎಂದು ಶರಪೋವಾ ತಿಳಿಸಿದರು ಎಂದು ವೆಬ್ಸೈಟ್ವೊಂದು ಪ್ರಕಟಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement