ಪ್ರಶಸ್ತಿ ಸುತ್ತಿಗೆ ಪೆಟ್ರಾ
ಪ್ರಸಕ್ತ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಚೆಕ್ ಗಣರಾಜ್ಯದ ಪೆಟ್ರಾ ...
ಲಂಡನ್: ಪ್ರಸಕ್ತ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಚೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಉಪಾಂತ್ಯದ ಪಂದ್ಯದಲ್ಲಿ ಪೆಟ್ರಾ ಕ್ವಿಟೋವಾ ತಮ್ಮ ದೇಶದವರೇ ಆದ ಲೂಸಿ ಸ್ಯಾಫರೋವಾ ವಿರುದ್ಧ 7-6 (8-6), 6-1 ಸೆಟ್ಗಳ ಅಂತರದಲ್ಲಿ ಗೆಲವು ದಾಖಲಿಸಿದರು.
ಪಂದ್ಯದ ಆರಂಭದಿಂದಲೇ ಉಭಯ ಆಟಗಾರ್ತಿಯರು ತೀವ್ರ ಜಿದ್ದಾಜಿದ್ದಿನ ಹೋರಾಟಕ್ಕೆ ಮುಂದಾದ ಪರಿಣಾಮ ಮೊದಲ ಸೆಟ್ ಹೆಚ್ಚು ಪೈಪೋಟಿಯಿಂದ ಕೂಡಿತ್ತು. ನಂತರ ಎರಡನೇ ಸೆಟ್ನಲ್ಲಿ ಲೂಸಿ ಅವರಿಂದ ಹೆಚ್ಚು ಪ್ರತಿರೋಧ ಎದುರಿಸದ ಕ್ವಿಟೋವಾ ಸುಲಭ ಮುನ್ನಡೆಯೊಂದಿಗೆ ಗೆಲವು ದಾಖಲಿಸಿದರು.
ಇನ್ನು ಬುಧವಾರ ತಡ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕೆನಡಾದ ಮಿಲೊಸ್ ರೌನಿಕ್ ತಮ್ಮ ಎದುರಾಳಿ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೊಸ್ ವಿರುದ್ಧ 6-7 (4-7), 6-2, 6-4, 7-6 (7-4) ಸೆಟ್ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.
ಸಾನಿಯಾ ಜೋಡಿ ಪ್ರಿಕ್ವಾರ್ಟರ್ಗೆ: ಬುಧವಾರ ತಡರಾತ್ರಿ ನಡೆದ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಸಾನಿಯಾ ಜೋಡಿಯು ತಮ್ಮ ಎದುರಾಳಿ ಜೋಡಿಯಾದ ಮ್ಯಾಟ್ ಪ್ಯಾವಿಕ್ ಹಾಗೂ ಬೊಜಾನ ಜೊವಾನೊವಿಸ್ಕಿ ವಿರುದ್ಧ 6-3, 6-3 ನೇರ ಸೆಟ್ಗಳ ಅಂತರದಲ್ಲಿ ಗೆಲವು ದಾಖಲಿಸಿ 16ರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.
ಇನ್ನು ಮತ್ತೊಂದು ಮಿಶ್ರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ರೋಹನ್ ಬೋಪಣ್ಣ ಹಾಗೂ ಆ್ಯಂಡ್ರ ಲಾವಕ್ಕೊವಾ ಜೋಡಿಯು 6-3, 5-7, 3-6 ಸೆಟ್ಗಳ ಅಂತರದಲ್ಲಿ ರಷ್ಯಾದ ಮಿಕೈಲ್ ಎಲ್ಗಿನ್ ಹಾಗೂ ಅನಾಸ್ಟೇಸಿಯಾ ರೊಡಿನೋವಾ ವಿರುದ್ಧ ಪರಾಭವಗೊಂಡಿದೆ.