ಮರೆತೇನೆಂದರೂ ಮರೆಯಲಾರದ ತಪ್ಪು...
ವಿಶ್ವಕಪ್ನ ಪ್ರಿಕ್ವಾರ್ಟರ್ ಫೈನಲ್ನಲ್ಲಿ ಬ್ರೆಜಿಲ್ ಮತ್ತು ಚಿಲಿ ನಡುವೆ ನಡೆದ ಪಂದ್ಯ ಪೆನಾಲ್ಟಿ ಶೂಟೌಟ್ಗೆ ಜಾರಿತ್ತು. ಅಲ್ಲಿ 119ನೇ ನಿಮಿಷದಲ್ಲಿ ಚಿಲಿಯ ಮಾರ್ಸಿಯೋ ಪಿನಿಲ್ಲಾ ಶೂಟ್ ಮಾಡಿದ ಚೆಂಡು ಗೋಲು ಪೆಟ್ಟಿಗೆ ಸೇರಿದೆ, ಕ್ರಾಸ್ಬಾರ್ಗೆ ಬಡಿದು ಹಿಂದಿರುಗಿತು. ಅದು ಚಿಲಿ ಸೋಲಿಗೆ ಕಾರಣವಾಗಿತ್ತು. ಜೀವನದಲ್ಲಿ ತಾವು ಮಾಡಿದ ಪ್ರಮುಖ ತಪ್ಪು ಮರೆತು ಹೋಗದಿರಲಿ ಎಂಬ ಕಾರಣಕ್ಕೆ ಪಿನಿಲ್ಲಾ ಆ ಘಟನೆಯನ್ನು ಟ್ಯಾಟೂ ಮೂಲಕ ಬೆನ್ನ ಮೇಲೆ ಬರೆಸಿಕೊಂಡಿದ್ದಾರೆ.