ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಜೊಕೊವಿಚ್ ಚಾಂಪಿಯನ್

ಸರ್ಬಿಯಾದ ನೊವಾಕ್ ಜೊಕೊವಿಚ್ ಪ್ರತಿಷ್ಠಿತ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್...

Rashmi Kasaragodu
Updated On : 7 Jul 2014, 1:37 am

ಲಂಡನ್: ಸರ್ಬಿಯಾದ ನೊವಾಕ್ ಜೊಕೊವಿಚ್ ಪ್ರತಿಷ್ಠಿತ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿಯ ಗರಿ ಮೂಡಿಸಿಕೊಂಡಿದ್ದಾರೆ.
ಆಲ್ ಇಂಗ್ಲೆಂಡ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಜೊಕೊವಿಚ್ 6-7 (7-9), 6-4, 7-6 (7-4), 5-7, 6-4 ಸೆಟ್‌ಗಳಿಂದ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಅವರನ್ನು ಸೋಲಿಸಿ ಈ ಸಾಧನೆ ಮಾಡಿದರು. ಇದು ಜೊಕೊವಿಚ್‌ಗೆ 2ನೇ ವಿಂಬಲ್ಡನ್ ಹಾಗೂ ಒಟ್ಟಾರೆ 7ನೇ ಗ್ರಾನ್ ಸ್ಲಾಮ್ ಪ್ರಶಸ್ತಿಯಾಗಿದೆ.       ಮತ್ತೊಂದೆಡೆ ವಿಂಬಲ್ಡನ್‌ನಲ್ಲಿ ಹೊಸ ಇತಿಹಾಸ ಬರೆಯುವ ಕನಸು ಕಂಡಿದ್ದ 4ನೇ ಶ್ರೇಯಾಂಕಿತ ಫೆಡರರ್‌ಗೆ ಭಾರೀ ನಿರಾಸೆಗೊಂಡರು. ಒಂದು ವೇಳೆ ಫೆಡರರ್ ಪ್ರಶಸ್ತಿ ಗೆದ್ದುಕೊಂಡಿದ್ದರೆ, ಅತಿ ಹೆಚ್ಚು ವಿಂಬಲ್ಡನ್ ಪ್ರಶಸ್ತಿ ಗೆದ್ದ (8 ಬಾರಿ) ವಿಶ್ವದ ಮೊದಲಿಗ ಎಂಬ ದಾಖಲೆ ಬರೆಯಲಿದ್ದರು. ಆದರೆ, ಫೆಡರರ್ ಸೋಲುವುದರೊಂದಿಗೆ ಪೀಟ್ ಸಾಂಪ್ರಾಸ್ (ತಲಾ 7 ಬಾರಿ) ಅವರೊಂದಿಗೆ ಜಂಟಿ ಅಗ್ರಸ್ಥಾನದಲ್ಲೇ ಉಳಿಯುವಂತಾಯಿತು.
ವಿಂಬಲ್ಡನ್‌ನಲ್ಲಿ ಈ ಹಿಂದೆ 8 ಬಾರಿ ಫೈನಲ್ ಪ್ರವೇಶಿಸಿದ್ದ ರೋಜರ್ ಫೆಡರರ್ 7 ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಒಮ್ಮೆ ಮಾತ್ರ ಅಂದರೆ, 2008ರಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ ವಿರುದ್ಧ 5 ಐದು ಸೆಟ್‌ಗಳ ಸುದೀರ್ಘ ಹೋರಾಟದಲ್ಲಿ ಸೋತು ಪ್ರಶಸ್ತಿ ಕೈಚೆಲ್ಲಿದ್ದರು.
1999ರಲ್ಲಿ ವಿಂಬಲ್ಡನ್ ರಂಗ ಪ್ರವೇಶ ಮಾಡಿದ್ದ ಫೆಡರರ್ ಹಸಿರು ಹುಲ್ಲಿನ ಅಂಗಣದಲ್ಲಿ ಈ ಬಾರಿ ತಮ್ಮ ಚಕ್ರಾಧಿಪತ್ಯ ಸ್ಥಾಪಿಸುವಲ್ಲಿ ವಿಫಲವಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement