ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತ ಎ ತಂಡಕ್ಕೆ ತಿವಾರಿ, ಓಜಾ ಆಸರೆ

ಮಧ್ಯಮ ಕ್ರಮಾಂಕದ ದಾಂಡಿಗ ನಾಯಕ ಮನೋಜ್ ತಿವಾರಿ ಹಾಗೂ ಕೆಳಕ್ರಮಾಂಕದಲ್ಲಿ ನಮನ್ ಓಜಾ ಜವಾಬ್ದಾರಿಯುತ...

Rashmi Kasaragodu
Updated On : 7 Jul 2014, 1:08 am

ಬ್ರಿಸ್ಬೇನ್: ಮಧ್ಯಮ ಕ್ರಮಾಂಕದ ದಾಂಡಿಗ ನಾಯಕ ಮನೋಜ್ ತಿವಾರಿ ಹಾಗೂ ಕೆಳಕ್ರಮಾಂಕದಲ್ಲಿ ನಮನ್ ಓಜಾ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡುವುದರೊಂದಿಗೆ ಭಾರತ 'ಎ' ತಂಡ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 'ಎ' ವಿರುದ್ಧ ಮೊದಲ ಇನಿಂಗ್ಸ್ನಲ್ಲಿ ಉತ್ತಮ ಮೊತ್ತದತ್ತ ಸಾಗಿದೆ.
ಅಲೆನ್ ಬಾರ್ಡರ್ ಫೀಲ್ಡ್ನಲ್ಲಿ ಭಾನುವಾರ ಆರಂಭವಾದ ನಾಲ್ಕು ದಿನಗಳ ಪಂದ್ಯದಲ್ಲಿ ಮೊದಲ ದಿನದಾಟ ನಿಂತಾಗ ಭಾರತ, 89.1 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 304 ರನ್ಗಳ ಗೌರವ ಮೊತ್ತ ಸಂಪಾದಿಸಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಉತ್ತಮ ಆರಂಭ ದೊರೆಯಲಿಲಲ್ಲ. 43 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು.
ಇನಿಂಗ್ಸ್ ಆರಂಭಿಸಿದ ರಾಬಿನ್ ಉತ್ತಪ್ಪ ಮತ್ತು ಕೆ.ಎಲ್. ರಾಹುಲ್ ತಂಡದ ಮೊತ್ತ 35 ರನ್ಗಳಾಗುವಷ್ಟರಲ್ಲಿ ಪೆವಿಲಿಯನ್ ಸೇರಿದರು. ನಾಲ್ಕನೇ ಕ್ರಮಾಂಕದಲ್ಲಿ ಬಂದ ಅಂಬಟಿ ರಾಯುಡು 9 ಎಸೆತಗಳನ್ನು ಎದುರಿಸಿದರೂ ಸಹ ಖಾತೆ ತೆರೆಯದೇ ನಿರ್ಗಮಿಸಿದರು.
ಆದರೆ, ಮೂರನೇ ಕ್ರಮಾಂಕದಲ್ಲಿ ಬಂದ ಜೀವನ್ಜೋತ್ ಸಿಂಗ್ ಮತ್ತು ಮನೋಜ್ ತಿವಾರಿ ನಾಲ್ಕನೇ ವಿಕೆಟ್ ಪಾಲುದಾರಿಕೆ ಆಟದಲ್ಲಿ 134 ರನ್ ಸೇರಿಸುವ ಮೂಲಕ ತಂಡವನ್ನು ಆರಂಭದ ಆಘಾತದಿಂದ ಪಾರು ಮಾಡಿದರು. ಅರ್ಧಶತಕ ಬಾರಿಸಿದ ನಂತರ ಜೀವನ್ಜೋತ್ ಅವರು ವಿಕೆಟ್ ಒಪ್ಪಿಸಿದರು.
ಆದರೆ, ನಂತರದಲ್ಲಿ ಮನೋಜ್ ತಿವಾರಿ ಮತ್ತು ನಮನ್ ಓಜಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಉತ್ತಮ ರೀತಿಯಲ್ಲಿ ರನ್ ಸಂಪಾದಿಸಿ ಭಾರತಕ್ಕೆ ದಿನದ ಗೌರವ ತಂದುಕೊಟ್ಟರು.
ಮನೋಜ್ ತಿವಾರಿ 118 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಒಳಗೊಂಡ 83 ರನ್ಗಳಿಸಿ ನಿರ್ಗಮಿಸಿದರೆ, ವಿಕೆಟ್ ಕೀಪರ್ ನಮನ್ ಓಜಾ 115 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಹೊಂದಿದ್ದ 82 ರನ್ಗಳಿಸಿ ಎರಡನೇ ದಿನಕ್ಕೆ ವಿಕೆಟ್ ಕಾಯ್ದುಕೊಳ್ಳುವ ಮೂಲಕ ಭಾರತಕ್ಕೆ ಉತ್ತಮ ಚೇತರಿಕೆ ನೀಡಿದರು.
ಇನ್ನು ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಜೀವನ್ಜೋತ್ ಸಿಂಗ್ ಸಹ (56ರನ್, 124 ಎಸೆತ, 7 ಬೌಂಡರಿ) ಅರ್ಧಶತಕದ ಕಾಣಿಕೆ ನೀಡಿದರು.
ಈ ಮಧ್ಯೆ ಕರ್ನಾಟಕದ ಬ್ಯಾಟ್ಸ್ಮನ್ಗಳಾದ ರಾಬಿನ್ ಉತ್ತಪ್ಪ (23), ಕರುಣ್ ನಾಯರ್ (26) ಹಾಗೂ ಕೆ.ಎಲ್. ರಾಹುಲ್ (15) ವೈಯಕ್ತಿಕವಾಗಿ ಬೃಹತ್ ಮೊತ್ತ ಪೇರಿಸಲು ವಿಫಲರಾದರು.
ಆಸ್ಟ್ರೇಲಿಯಾ ಕಿರಿಯರ ತಂಡದ ಪರ ಮಿಚೆಲ್ ಮಾರ್ಶ್, ಬೆನ್ ಕಟಿಂಗ್ ಮತ್ತು ಕೆಮರೂನ್ ಬಾಯ್ಸ್ ತಲಾ 2 ವಿಕೆಟ್ ಉರುಳಿಸಿ ಗಮನ ಸೆಳೆದರು. ಪ್ರಮುಖವಾಗಿ ತಿವಾರಿ ಮತ್ತು  ನಮನ್ ಓಜಾ ಅವರನ್ನು ಬೇಗನೆ ಪೆವಿಲಿಯನ್ಗೆ ಕಳುಹಿಸಿ ಪಂದ್ಯದ ಮೇಲೆ ಹಿಡಿದ ಸಾಧಿಸುವ ಆಸ್ಟ್ರೇಲಿಯಾ ನಾಯಕ ಜೇಮ್ಸ್ ಫಾಕ್ನರ್ ಲೆಕ್ಕಾಚಾರ ಫಲ ಕೊಡಲಿಲ್ಲ.
ಸಂಕ್ಷಿಪ್ತ ಸ್ಕೋರ್
ಭಾರತ 'ಎ' ಮೊದಲ ಇನಿಂಗ್ಸ್ 89.1 ಓವರುಗಳಲ್ಲಿ 6 ವಿಕೆಟ್ಗೆ 304 (ಮನೋಜ್ ತಿವಾರಿ 83, ನಮನ್ ಓಜಾ ಬ್ಯಾಟಿಂಗ್ 82, ಜೀವನ್ಜೋತ್ ಸಿಂಗ್ 56, ಕರುಣ್ ನಾಯರ್ 26, ರಾಬಿನ್ ಉತ್ತಪ್ಪ 23, ಕೆ.ಎಲ್. ರಾಹುಲ್ 15, ಮಿಚೆಲ್ ಮಾರ್ಶ್ 46ಕ್ಕೆ2, ಬೆನ್ ಕಟಿಂಗ್ 65ಕ್ಕೆ2, ಕೆಮರೂನ್ ಬಾಯ್ಸ್ 84ಕ್ಕೆ2

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement