ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಲಂಕೆ ಗೆದ್ದ ಆಫ್ರಿಕಾ

ಹಶೀಂ ಆಮ್ಲಾ (109) ಅಮೋಘ ಶತಕದ ನೆರವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ, ಶ್ರೀಲಂಕಾ ವಿರುದ್ಧ ...

Rashmi Kasaragodu
Updated On : 7 Jul 2014, 1:11 am

ಕೊಲಂಬೊ: ಹಶೀಂ ಆಮ್ಲಾ (109) ಅಮೋಘ ಶತಕದ ನೆರವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ, ಶ್ರೀಲಂಕಾ ವಿರುದ್ಧ ಭಾನುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ 75 ರನ್‌ಗಳ ಅಂತರದಿಂದ ಜಯ ಸಾಧಿಸಿತು. ಇದರೊಂದಿಗೆ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಹರಿಣಗಳ ತಂಡ 1-0 ಅಂತರದಿಂದ ಮುನ್ನಡೆ ಪಡೆಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ, 5 ವಿಕೆಟ್ ಕಳೆದುಕೊಂಡು 304 ರನ್ ಗಳಿಸಿತು. ನಂತರ ಈ ಬೃಹತ್ ಮೊತ್ತ ಬೆನ್ನಟ್ಟಿದ ಆತಿಥೇಯ ಶ್ರೀಲಂಕಾ, 40.3 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 229 ರನ್ ಕಲೆ ಹಾಕಿತು.
ಸಂಕ್ಷಿಪ್ತ ಸ್ಕೋರ್:    ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 304
ಆಮ್ಲಾ 109, ಡಿವಿಲಿಯರ್ಸ್ 75, ಅಜಂತಾ ಮೆಂಡೀಸ್ 61/3, ಸೇನಾನಾಯಕೆ 49/1).     ಶ್ರೀಲಂಕಾ 40.3 ಓವರ್‌ಗಳಲ್ಲಿ 229 ಸಂಗಕ್ಕಾರ 88, ತಿಲಕರತ್ನೆ ದಿಲ್ಷಾನ್ 40,  ಇಮ್ರಾನ್ ತಾಹೀರ್ 50/3, ಡೇಲ್ ಸ್ಟೇಯ್ನ್ 38/2).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement