ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಜೀವನ ಶ್ರೇಷ್ಠ 5ರಲ್ಲಿ ಸಾನಿಯಾ ಮಿರ್ಜಾ

ಭಾರತ ಟೆನಿಸ್ನ ಮಹಿಳಾ ಡಬಲ್ಸ್ ಆಟಗಾರ್ತಿ ಸಾನಿಯಾ ಮಿರ್ಜಾ ವಿಶ್ವ ಟೆನಿಸ್ ...

Rashmi Kasaragodu
Updated On : 8 Jul 2014, 1:13 am

ನವದೆಹಲಿ: ಭಾರತ ಟೆನಿಸ್ನ ಮಹಿಳಾ ಡಬಲ್ಸ್ ಆಟಗಾರ್ತಿ ಸಾನಿಯಾ ಮಿರ್ಜಾ ವಿಶ್ವ ಟೆನಿಸ್ ರ್ಯಾಂಕಿಂಗ್ನ ಅಗ್ರ ಐದು ಸ್ಥಾನಗಳಲ್ಲಿ ಸ್ಥಾನ ಪಡೆದು ವೃತ್ತಿಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ.
ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸಾನಿಯಾ ಮಿರ್ಜಾ ತಮ್ಮ ಜತೆಗಾರ್ತಿ ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಜೊತೆ ಸಾಧಾರಣ ಪ್ರದರ್ಶನ ನೀಡಿದರೂ, 130 ರ್ಯಾಂಕಿಂಗ್ ಅಂಕಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾದರು. ಹಾಗಾಗಿ ಸಾನಿಯಾ ಮಿರ್ಜಾ ಮಹಿಳಾ ಡಬಲ್ಸ್ ವಿಭಾಗದ ರ್ಯಾಂಕಿಂಗ್ನಲ್ಲಿ 5ನೇ ಸ್ಥಾನ ಪಡೆದಿದ್ದಾರೆ.
ನಾನು ಗಾಯದ ಸಮಸ್ಯೆಯಿಂದ ಗುಣಮುಖವಾಗಿ ಬಂದ ನಂತರ ಸುದೀರ್ಘ ಪ್ರಯಾಣ ಬೆಳೆಸಿದ್ದೇನೆ. ಈ ಸಮಯದಲ್ಲೂ ನಾನು ಉತ್ತಮ ಪ್ರದರ್ಶನದೊಂದಿಗೆ ಈ ಸ್ಥಾನ ಪಡೆದಿರುವುದು ತೃಪ್ತಿ ತಂದಿದೆ ಎಂದು ಸಾನಿಯಾ ಸಂತಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement