ಶಕೀಬ್ ಮೇಲೆ 6 ತಿಂಗಳ ನಿಷೇಧ
ಢಾಕಾ: ಅಶಿಸ್ತಿನ ವರ್ತನೆಯ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅವರ ಮೇಲೆ ಎಲ್ಲಾ ಮಾದರಿಯ ಕ್ರಿಕೆಟ್ನಿಂದ 6 ತಿಂಗಳ ನಿಷೇಧ ಹೇರಿದೆ. ಅಲ್ಲದೆ ವಿದೇಶಗಳಲ್ಲಿ ನಡೆಯುವ ಯಾವುದೇ ಲೀಗ್ ಪಂದ್ಯಾವಳಿಯಲ್ಲೂ ಭಾಗವಹಿಸಲು ನಿರಾಪೇಕ್ಷಣ ಪತ್ರವನ್ನು ನೀಡದಿರಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಶಕೀಬ್ ಅಲ್ ಹಸನ್ ಸರಿಯಾದ ನಿರಾಪೇಕ್ಷಣ ಪತ್ರವಿಲ್ಲದೆ ಕೆರಿಬಿಯನ್ ಪ್ರಿಮಿಯರ್ ಲೀಗ್ನಲ್ಲಿ ಭಾಗವಹಿಸಲು ತೆರಳಿದ್ದರು. ನಂತರ ಬಿಸಿಬಿ ಶಕೀಬ್ ಅವರನ್ನು ತಂಡದ ಅಭ್ಯಾಸ ಶಿಬಿರದಲ್ಲಿ ಭಾಗವಹಿಸಲು ಮಂಡಳಿ ತಿಳಿಸಿದ್ದ ಹಿನ್ನೆಲೆಯಲ್ಲಿ ಶಕೀಬ್, ಅಂತಾರಾಷ್ಟ್ರೀಯ ಟೆಸ್ಟ್ ಹಾಗೂ ಏಕದಿನ ತಂಡಗಳಿಗೆ ನಿವೃತ್ತಿ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಹಾಗಾಗಿ ಬಿಸಿಬಿ ಶಕೀಬ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ.