ಎನ್ಬಿಎಗೆ ಬುಲ್ಲಾರ್
ವಾಶಿಂಗ್ಟನ್: ಅಮೆರಿಕಾದ ವೃತ್ತಿಪರ ಬಾಸ್ಕೆಟ್ಬಾಲ್ ಕ್ಲಬ್ ಆಗಿರುವ ಸ್ಯಾಕ್ರ್ಮೆಂಟೊ ಕಿಂಗ್ಸ್ ತಂಡಕ್ಕೆ ಭಾರತದ ಮೂಲದ ಸಿಮ್ ಬುಲ್ಲಾರ್ ಆಯ್ಕೆಯಾಗಿದ್ದಾರೆ. ಇದರೊಂದಿಗೆ ನ್ಯಾಷನಲ್ ಬಾಸ್ಕೆಟ್ಬಾಲ್ ಅಸೋಸಿಯೇಷನ್ (ಎನ್ಬಿಎ) ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
21 ವರ್ಷದ ಬುಲ್ಲಾರ್, 7.5 ಅಡಿ ಎತ್ತರವಿದ್ದು, ಎನ್ಬಿಎ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಕೆನಡಾದಲ್ಲಿ ಹುಟ್ಟಿ ಬೆಳೆದ ಬುಲ್ಲಾರ್ ಅವರ ತಂದೆ ತಾಯಿ ಪಂಜಾಬ್ ಮೂಲದವರಾಗಿದ್ದಾರೆ.
ನನ್ನ ಗಾತ್ರ ಸುದೀರ್ಘ ವೃತ್ತಿ ಜೀವನಕ್ಕೆ ಅವಕಾಶ ನೀಡುವುದಿಲ್ಲ. ಹಾಗಾಗಿ ಪ್ರಸಕ್ತ ಸಮಯದಲ್ಲೆ ಹೆಚ್ಚು ಆಡಬೇಕು ಎಂದು ಪತ್ರಿಕೆಯೊದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.