ಗ್ಲಾಸ್ಗೋ ಅಥ್ಲೀಟ್ಗಳ ಸಂಖ್ಯೆ ಕಡಿತ
ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ತೆರಳುತ್ತಿದ್ದ ಭಾರತದ ಅಥ್ಲೀಟ್ಗಳ ಸಂಖ್ಯೆ ಕುಗ್ಗಿದೆ. ಗ್ಲಾಸ್ಗೋಗೆ 41 ಅಥ್ಲೀಟ್ಗಳು...
ನವದೆಹಲಿ: ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ತೆರಳುತ್ತಿದ್ದ ಭಾರತದ ಅಥ್ಲೀಟ್ಗಳ ಸಂಖ್ಯೆ ಕುಗ್ಗಿದೆ. ಗ್ಲಾಸ್ಗೋಗೆ 41 ಅಥ್ಲೀಟ್ಗಳು ತೆರಳಬೇಕಾಗಿತ್ತು. ಆದರೆ, ಅದು 33ಕ್ಕೆ ಕುಗ್ಗಿದೆ.
ಕಾರಣ ವಿವಾದಿತ ಟ್ರಿಪಲ್ ಜಂಪರ್ ರಂಜಿತ್ ಮಹೇಶ್ವರಿ, 4್ಢ400 ಪುರುಷರ ರಿಲೇ ತಂಡದ 6 ಸದಸ್ಯರು ಕ್ರೀಡಾಕೂಟದಿಂದ ಹೊರಗುಳಿದಿದ್ದಾರೆ.
ಜುಲೈ 23ರಿಂದ ಆರಂಭವಾಗಲಿರುವ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಈಗಾಗಲೇ 224 ಅಥ್ಲೀಟ್ಗಳ ಹೆಸರನ್ನು ಪ್ರಕಟಿಸಿತ್ತು.
ಈಗ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳ ಸಂಖ್ಯೆ 216ಕ್ಕೆ ಸೀಮಿತಗೊಂಡಿದೆ.
ಇನ್ನೊಂದು ಕುತೂಹಲದ ವಿಷಯವೆಂದರೆ, 2010ರ ಕಾಮನ್ವೆಲ್ತ್ ಕ್ರೀಡಾಕೂಟದ ಡಿಸ್ಕಸ್ ಥ್ರೋ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಹರ್ವಂತ್ ಕೌರ್ ಅವರ ಹೆಸರೂ, ಈ ಮುನ್ನ ಐಒಎ ಬಿಡುಗಡೆ ಮಾಡಿದ್ದ ಅಥ್ಲೀಟ್ಗಳ ಪಟ್ಟಿಯಲ್ಲಿ ಸೇರಿತ್ತು.
ಆದರೆ, 34 ವರ್ಷದ ಕೌರ್ ಕಳೆದ ಎರಡು ವರ್ಷಗಳಿಂದ ಯಾವುದೇ ಕ್ರೀಡಾಕೂಟದಲ್ಲಿ ಭಾಗವಹಿಸಿಲ್ಲ. 2012ರಲ್ಲಿ ನಡೆದ ಅಂತಾರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಆಕೆ ಭಾಗವಹಿಸಿದ ಕೊನೆಯ ಪಂದ್ಯಾವಳಿಯಾಗಿದೆ. ಹೀಗಾಗಿ, ಈಗ ಅಂತಿಮ ಪಟ್ಟಿಯಲ್ಲಿ ಅವರ ಹೆಸರನ್ನೂ ಕೈಬಿಡಲಾಗಿದೆ.
ಆದರೆ, ಭಾರತೀಯ ಕ್ರೀಡಾ ಪ್ರಾಧಿಕಾರದ ನಿರ್ದೇಶನದಂತೆ, ಲಿಂಗಪರೀಕ್ಷೆಗೊಳಗಾಗಿರುವ ಡುಟೀ ಚಾಂದ್ ಅವರು 33 ಸದಸ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ 33 ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ಗಳು ಭಾಗವಹಿಸುತ್ತಿದ್ದಾರೆ.
ರಂಜಿತ್ ಮಹೇಶ್ವರಿ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿಲ್ಲ. ಅಲ್ಲದೆ, ಗಾಯದ ಹಿನ್ನೆಲೆಯಲ್ಲಿ 4್ಢ400 ಪುರುಷರ ರಿಲೇ ತಂಡದ 6 ಸದಸ್ಯರು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿಲ್ಲ ಎಂದು ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆಯ ಕಾರ್ಯದರ್ಶಿ ಸಿ.ಕೆ ವಲ್ಸಾನ್ ಅವರು ತಿಳಿಸಿದ್ದಾರೆ.
ಹರ್ವಂತ್ ಕೌರ್ ಪಟ್ಟಿಯಲ್ಲಿ ಹೇಗೆ ಸೇರಿಕೊಂಡರು ಎಂಬ ಬಗ್ಗೆ ಪ್ರಶ್ನೆ ಕೇಳಿದಾಗ, ವಲ್ಸಾನ್ ಅವರು ಹರಕೆ ಉತ್ತರ ನೀಡಿದರು.
ಇನ್ನು ಲಿಂಗ ಪರೀಕ್ಷೆಗೊಳಗಾಗಿರುವ ಡುಟೀ ಚಾಂದ್ ಬಗ್ಗೆ ಸಹ ವಲ್ಸಾನ್ ಯಾವುದೇ ರೀತಿಯ ವಿವರ ನೀಡಲಿಲ್ಲ. ಈಗ ಮೂಲ ಪಟ್ಟಿಯಲ್ಲಿದ್ದ ಒಟ್ಟು 8 ಅಥ್ಲೀಟ್ಗಳು ಪಂದ್ಯಾವಳಿಯಿಂದ ಹೊರಬಿದ್ದಂತಾಗಿದೆ.