ಸಾಮಾಜಿಕ ತಾಣದಲ್ಲಿ ವಿಶ್ವಕಪ್ ದಾಖಲೆ
ರಿಯೊ ಡೀ ಜೆನೈರೊ: ಜರ್ಮನಿ ಹಾಗೂ ಅರ್ಜೆಂಟೀನಾ ನಡುವಣ ರೋಚಕ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ಟ್ವಿಟರ್ ಹಾಗೂ ಫೇಸ್ಬುಕ್ ಸಾಮಾಜಿಕ ತಾಣಗಳಲ್ಲಿ ಹೊಸ ದಾಖಲೆ ನಿರ್ಮಿಸಿವೆ.
ಲಭ್ಯವಿರುವ ಅಂಕಿ ಅಂಶಗಳ ಆಧಾರದ ಮೇಲೆ, ಫೈನಲ್ ಪಂದ್ಯದ ಕುರಿತು ಪ್ರತಿ ನಿಮಿಷಕ್ಕೆ 6,18,725 ಟ್ವೀಟ್ಗಳು ಬರುತ್ತಿದ್ದವು.
ಇನ್ನು ಫೇಸ್ಬುಕ್ನಲ್ಲಿ ವಿಶ್ವದಾದ್ಯಂತ ಒಟ್ಟು 8.8 ಕೋಟಿ ಜನರು ಪಂದ್ಯದ ಬಗ್ಗೆ ಚರ್ಚಿಸಿದ್ದು, 20.8 ಕೋಟಿ ಸಂದೇಶಗಳು ಹರಿದಾಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಜರ್ಮನಿ ಹಾಗೂ ಬ್ರೆಜಿಲ್ ನಡುವಣ ಉಪಾಂತ್ಯದ ಪಂದ್ಯದಲ್ಲಿ 6.6 ಕೋಟಿ ಜನರು 20 ಕೋಟಿಗೂ ಹೆಚ್ಚಿನ ಪೊಸ್ಟ್, ಲೈಕ್ ಹಾಗೂ ಕಾಮೆಂಟ್ಗಳನ್ನು ಮಾಡಿದ್ದರು.
ಅರ್ಜೆಂಟೀನಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಜರ್ಮನಿ ತಂಡ 1-0 ಅಂತರದ ಗೆಲವಿನೊಂದಿಗೆ ಪ್ರಶಸ್ತಿ ಬಾಚಿಕೊಂಡಿತ್ತು. ಈ ಮೂಲಕ ದಕ್ಷಿಣ ಅಮೆರಿಕಾದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿದ ಮೊದಲ ಯೂರೋಪ್ ತಂಡ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಪಂದ್ಯದ ಸಮಯ ಹಾಗೂ ಪಂದ್ಯದ ನಂತರ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು.
ಇನ್ನು ಪಂದ್ಯಾವಳಿಯ ಆತಿಥ್ಯ ವಹಿಸಿದ್ದ ಬ್ರೆಜಿಲ್ನ ಫುಟ್ಬಾಲ್ ದಂತಕತೆ ಪೀಲೆ ಪ್ರಶಸ್ತಿ ಗೆದ್ದ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು. ಇಂದಿನ ಗೆಲವಿಗಾಗಿ ಅರ್ಜೆಂಟೀನಾ ತಂಡಕ್ಕೆ ಅಭಿನಂಧನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದರು.
ಇನ್ನು ಅಮೆರಿಕಾ ಫುಟ್ಬಾಲ್ ತಂಡದ ಕೋಚ್ ಜರ್ಜೆನ್ ಕ್ಲಿನ್ಸ್ಮನ್, ತನ್ನ ತವರು ರಾಷ್ಟ್ರ ತಂಡ ಜರ್ಮನಿ ಗೆದ್ದಾಗ ಸಂತಸ ವ್ಯಕ್ತಪಡಿಸಿದ್ದರು.
ಜರ್ಮನಿಯ ಮಾಜಿ ಟೆನಿಸ್ ಆಟಗಾರ ಬೋರಿಸ್ ಬೆಕರ್, ಯಸ್ ವಿ ಡಿಡ್ ಇಟ್ ಎಂದು ಟ್ವೀಟ್ ಮಾಡಿದ್ದರು. ಹಾಗೇ ವಿಶ್ವತ ಖ್ಯಾತನಾಮರು, ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ.