ಹೋರಾಡಿ ಮುಗ್ಗರಿಸಿದ ಭಾರತ
ಮುಂಬೈ: ತೀವ್ರ ಹೋರಾಟ ಪ್ರದರ್ಶನದ ಹೊರತಾಗಿಯೂ ಭಾರತ ಬಾಸ್ಕೆಟ್ಬಾಲ್ ತಂಡವು 5ನೇ ಎಫ್ಐಬಿಎ ಏಷ್ಯಾ ಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಇರಾನ್ ವಿರುದ್ಧ ಮುಖಭಂಗ ಅನುಭವಿಸಿದೆ.
ಮಂಗಳವಾರ ಚೀನಾದ ವುಹಾನ್ನಲ್ಲಿ ನಡೆದ ಎ ಗುಂಪಿನ ಪಂದ್ಯದಲ್ಲಿ ಭಾರತ ತಂಡ 49-62 ಅಂಕಗಳ ಅಂತರದಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ 20ನೇ ರ್ಯಾಂಕಿಂಗ್ ಪಡೆದಿರುವ ಇರಾನ್ಗೆ ಮಣಿಯಿತು.
ಭಾರತದ ಪರ ಅಮ್ಜೋತ್ ಸಿಂಗ್ 17 ಅಂಕಗಳನ್ನು ಗಳಿಸುವ ಮೂಲಕ ತಂಡಕ್ಕೆ ಉತ್ತಮ ಮುನ್ನಡೆ ತಂದುಕೊಟ್ಟರು. ಹಾಗಾಗಿ ಭಾರತ ಪಂದ್ಯದ ಅರ್ಧದಲ್ಲಿ 12 ಅಂಕಗಳ ಮುನ್ನ್ನಡೆ ಸಾಧಿಸಿತ್ತು. ಆದರೆ ನಂತರದ ಹಂತಗಳಲ್ಲಿ ಇರಾನ್ನ ಅರ್ಸಲನ್ ಕಜೆಮಿ ಅವರು ಭಾರತ ತಂಡದ ಆಟಗಾರರಿಗೆ ಸವಾಲು ನೀಡುವ ಮೂಲಕ ಸತತ 18 ಅಂಕಗಳನ್ನು ಬಾಚಿಕೊಂಡರು. ಹಾಗಾಗಿ ಭಾರತ ಪಂದ್ಯದಲ್ಲಿ ಸಾದಿಸಿದ್ದ ನಿಯಂತ್ರಣವನ್ನು ಕಳೆದುಕೊಂಡಿತು.
ಈ ಮೂಲಕ ಭಾರತ ತಂಡ ಟೂರ್ನಿಯಲ್ಲಿ 2 ಗೆಲವು ಹಾಗೂ ಎರಡು ಸೋಲುಗಳ ಫಲಿತಾಂಶ ಪಡೆದಿದೆ. ಚೀನಾ ವಿರುದ್ಧ ಐತಿಹಾಸಿಕ ಗೆಲವು ದಾಖಲಿಸಿದ್ದ ಭಾರತ, ನಂತರ ಇಂಡೋನೇಷ್ಯಾ ವಿರುದ್ಧ 91-55 ಅಂಕಗಳ ಅಂತರದಲ್ಲಿ ಗೆಲವು ದಾಖಲಿಸಿತ್ತು. ಈ ಮೂಲಕ ಕ್ವಾರ್ಟರ್ಫೈನಲ್ಗೆ ಪ್ರವೇಶ ಖಚಿತಪಡಿಸಿಕೊಂಡಿತ್ತು.
ಮೈಸೂರು ರೇಸ್
ನಾಳೆ ಮಧ್ಯಾಹ್ನ 2-30ರಿಂದ ಆರಂಭವಾಗುವ ಮೈಸೂರು ಬೇಸಿಗೆಯ 12ನೇ ದಿನದ ರೇಸ್ಗಳಿಗೆ ನಮ್ಮ ಆಯ್ಕೆ ಈ ರೀತಿ ಇದೆ.
1.1-ಶೇಡ್ಸ್ ಅಂಡ್ ಸ್ಕಾರ್ಲೆಟ್ 2-ಅರ್ಕ್ ಏಂಜಲ್
2.1-ರಾಯಲ್ ಶಾನ್ 2-ಸ್ಪಾನಿಯರ್ಡ್
3.1-ರಿಕೆಟಿ ರಾಕ್ 2-ಜಂಪ್ ಇನ್ ದಿ ರೆಡ್
4.1-ಇಂಡಿಯನ್ ಹಿರೊ 2-ಚಾರ್ಮ್ ಅಂಡ್ ಡ್ರೀಮ್
5.1-ಗನ್ಪೌಡರ್ 2-ರೈಸಿಂಗ್ ರಾಣೆ
6.1-ಎನ್ಸಾಟಸ್ ಎಲಿಗೆನ್ಸ್ 2-ಟೈಮ್ ಟು ಟೈಮ್
7.1-ಬ್ಲಾಕ್ವಿಂಡ್ 2-ಫ್ಲೈಯಿಂಗ್ ಹಾರ್ಸ್
ದಿನದ ಅತ್ಯುತ್ತಮ:
ರಾಯಲ್ ಶಾನ್