ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಇಂಡೋ-ಪಾಕ್ ಫುಟ್ಬಾಲ್ ಸರಣಿ

Vishwanath S
Updated On : 17 Jul 2014, 12:54 pm

ಕರಾಚಿ: ಭಾರತ ಹಾಗೂ ಪಾಕಿಸ್ತಾನ ತಂಡಗಳು ಭಾರತದಲ್ಲಿ ಸೌಹಾರ್ದ ಫುಟ್ಬಾಲ್ ಸರಣಿಯನ್ನಾಡಲಿದ್ದು, ಈ ಪಂದ್ಯಾವಳಿ ಮುಂದಿನ ತಿಂಗಳು ನಡೆಯಲಿದೆ ಎಂದು ಪಾಕಿಸ್ತಾನ ಫುಟ್ಬಾಲ್ ಫೆಡರೇಷನ್ ತಿಳಿಸಿದೆ.
ಸತತ 9 ವರ್ಷಗಳ ನಂತರ ಸಾಂಪ್ರದಾಯಿಕ ಎದುರಾಳಿಗಳ ನಡುವೆ ಸೌಹಾರ್ದ ಪಂದ್ಯಾವಳಿ ನಡೆಯುತ್ತಿದ್ದು, ಎಲ್ಲರ ನಿರೀಕ್ಷೆ ಹೆಚ್ಚಿಸಿದೆ.
ಪಾಕಿಸ್ತಾನ ತಂಡ ಅ.16ರಿಂದ 21ರವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದು, ಉಭಯ ದೇಶಗಳು ಆ.17 ಹಾಗೂ 20ರಂದು ಪಂದ್ಯಗಳನ್ನಾಡಲಿವೆ ಎಂದು ಪಾಕಿಸ್ತಾನ ಫುಟ್ಬಾಲ್ ಫೆಡರೇಷನ್ ಕಾರ್ಯದರ್ಶಿ ಅಹ್ಮದ್ ಯರ್ ಲೋಧಿ ತಿಳಿಸಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವೆ ಉತ್ತಮ ಕ್ರೀಡಾ ಸಂಬಂಧವನ್ನು ಮುಂದುವರಿಸಲು ಈ ಸರಣಿ ಮಹತ್ವದ್ದಾಗಿದೆ. ಅಲ್ಲದೆ ಉಭಯ ದೇಶಗಳ ಫುಟ್ಬಾಲ್ ಸಂಸ್ಥೆಗಳ ಅಭಿವೃದ್ಧಿಗೂ ಈ ಪಂದ್ಯಾವಳಿ ನೆರವಾಗಲಿದೆ ಎಂದು ತಿಳಿಸಿದರು.
ಭಾರತವೂ ನಮ್ಮ ವಿರುದ್ಧ ಆಡಲು ಇಚ್ಛಿಸಿದ್ದು, ಪಂದ್ಯಾವಳಿಗೆ ಒಪ್ಪಿಗೆ ನೀಡಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.
2005ರಲ್ಲಿ ಉಭಯ ತಂಡಗಳು ಸೌಹಾರ್ದ ಸರಣಿಯಲ್ಲಿ ಭಾಗವಹಿಸಿದ್ದು, ಪಾಕಿಸ್ತಾನ ತಂಡ ಗೋಲುಗಳ ಸರಾಸರಿ ಆಧಾರದ ಮೇಲೆ ಗೆಲವು ದಾಖಲಿಸಿತ್ತು.
ಕ್ರೀಡಾ ಗ್ರಾಮದಲ್ಲಿ ಅನಾರೋಗ್ಯಗ್ಲಾಸ್ಗೋ: ಕಾಮನ್‌ವೆಲ್ತ್ ಕ್ರೀಡಾಕೂಟ ನಡೆಯುವ ಗ್ಲಾಸ್ಗೋದ ಕ್ರೀಡಾ ಗ್ರಾಮದಲ್ಲಿ ಜನರು ಅನಾರೋಗ್ಯಕ್ಕೆ ಜಾರುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈಗಷ್ಟೇ ಅಥ್ಲೀಟ್‌ಗಳ ಆಗಮನವಾಗುತ್ತಿರುವ ಕ್ರೀಡಾ ಗ್ರಾಮದಲ್ಲಿ ವಾಂತಿ ಮತ್ತು ಭೇದಿ ಪ್ರಕರಣಗಳು ಹೆಚ್ಚಾಗುತ್ತಿವೆ. ಕ್ರೀಡಾ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರೇ ಅನಾರೋಗ್ಯಕ್ಕೆ ಜಾರಿರುವ 12 ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ, ಅಥ್ಲೀಟ್‌ಗಳು ಅಥವಾ ಯಾವುದೇ ದೇಶದ ತಂಡದ ಅಧಿಕಾರಿಗಳು ಅನಾರೋಗ್ಯಕ್ಕೀಡಾಗಿರುವ ಪ್ರಕರಣ ಬೆಳಕಿಗೆ ಬಂದಿಲ್ಲ ಎಂದು ಕ್ರೀಡಾಕೂಟದ ಸಂಘಟನಾಕಾರರು ಖಚಿತಪಡಿಸಿದ್ದಾರೆ.
ಬೆಂಗಳೂರು ಬುಲ್ಸ್‌ಗೆ ಚಾಲನೆ
ಬೆಂಗಳೂರು: ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯ ಬೆಂಗಳೂರು ಫ್ರಾಂಚೈಸಿಯಾದ 'ಬೆಂಗಳೂರು ಬುಲ್ಸ್‌'ಗೆ ಬುಧವಾರ ಚಾಲನೆ ನೀಡಲಾಯಿತು. ತಂಡದ 12 ಆಟಗಾರರು ಫ್ರಾಂಚೈಸಿಯ ಜರ್ಸಿ ತೊಟ್ಟು ತಂಡದ ಗೀತೆಯನ್ನು ಹಾಡುವ ಮೂಲಕ ಚಾಲನೆ ನೀಡಿದರು.  ಬರುವ ಜುಲೈ 26ರಿಂದ ಆರಂಭವಾಗಲಿರುವ ಪಂದ್ಯಾವಳಿಯಲ್ಲಿ ಒಟ್ಟು 8 ಫ್ರಾಂಚೈಸಿಗಳು ಭಾಗವಹಿಸಲಿವೆ. ಬೆಂಗಾಲ್ ವಾರಿಯರ್ಸ್, ಡೆಲ್ಲಿ, ಜೈಪುರ್ ಪಿಂಕ್ ಪ್ಯಾಂತರ್ಸ್, ಪಾಟ್ನಾ ಪಾರ್ಟಿಸ್, ಪುನೇರಿ ಪಲ್ಟಾನ್, ತೆಲಗು ಟೈಟನ್ಸ್ ಹಾಗೂ ಯು ಮುಂಬಾ ಲೀಗ್‌ನಲ್ಲಿ ಭಾಗವಹಿಸುವ ಇತರ ತಂಡಗಳಾಗಿವೆ.
ಬೆಂಗಳೂರು ತಂಡ ಮೂರು ವಿದೇಶಿ ಆಟಗಾರರು ಸೇರಿದಂತೆ ಕರ್ನಾಟಕದ ಯುವ ಪ್ರತಿಭೆ ಸುನಿಲ್ ಹನುಮಂತಯ್ಯ ಅವರನ್ನು ಹೊಂದಿದೆ.
ಬೆಂಗಳೂರು ಬುಲ್ಸ್ ತಂಡ ತನ್ನ ಮೊದಲ ಪಂದ್ಯ ಡೆಲ್ಲಿ ಡೈನೊಮೊಸ್ ತಂಡದೆದುರು ಸೆಣಸಲಿದೆ. ಪಂದ್ಯಾವಳಿಯಲ್ಲಿ ಒಟ್ಟು 60 ಪಂದ್ಯಗಳು ಎಂಟು ನಗರಗಳಲ್ಲಿ ನಡೆಯಲಿದ್ದು, ಫೈನಲ್ ಪಂದ್ಯ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿದೆ. ಪ್ರೊ ಕಬಡ್ಡಿ ಲೀಗ್ ಐಪಿಎಲ್ ಮಾದರಿಯದ್ದೇ ಆಗಿದ್ದು, ಕಾಸ್ಮಿಕ್ ಗ್ಲೋಬಲ್ ಮೀಡಿಯಾ ಬೆಂಗಳೂರು ಬುಲ್ಸ್ ಫ್ರಾಂಚೈಸಿ ಮಾಲೀಕತ್ವ ಹೊಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement