ಜಡೇಜಾ ವಿರುದ್ಧ ಇಂಗ್ಲೆಂಡ್ ದೂರು
ಲಂಡನ್: ಭಾರತ ಹಾಗೂ ಇಂಗಲೆಂಡ್ ವಿರುದ್ಧದ ಮೊದಲ ಪಂದ್ಯದ ವೇಳೆ ರವೀಂದ್ರ ಜಡೇಜಾ ಹಾಗೂ ಜೇಮ್ಸ್ ಆ್ಯಂಡರ್ಸನ್ ವಿರುದ್ಧ ಸಂಘರ್ಷ ತೀವ್ರತೆ ಪಡೆಯುತ್ತಿದೆ.
ಭಾರತ ತಂಡ ಆ್ಯಂಡರ್ಸನ್ ವಿರುದ್ಧ ಐಸಿಸಿಯ ಮೂರನೇ ಮಟ್ಟದ ನಿಯಮಾವಳಿಯನ್ನು ಉಲ್ಲಂಘಿಸಿದ ದೂರು ದಾಖಲಿಸಿದೆ. ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ ತಂಡ ಫಿಲ್ ನೀಲ್, ಜಡೇಜಾ ಅವರ ವಿರುದ್ಧ ಐಸಿಸಿಯ ಎರಡನೇ ಮಟ್ಟದ ಕಾನೂನು ಉಲ್ಲಂಘಿಸಿರುವ ದೂರು ನೀಡಿದ್ದಾರೆ.
ಮೈದಾನದಲ್ಲಿ ಮಾತಿನ ಚಕಮಕಿ ನಡೆದ ನಂತರ ಭೋಜನ ವಿರಾಮದ ಸಮಯದಲ್ಲಿ ಜಡೇಜಾ, ಆ್ಯಂಡರ್ಸನ್ ಜತೆಗೆ ಮಾತಿನ ಚಕಮಕಿಗಿಳಿದು ಬೆದರಿಕೆ ಹಾಕಿರುವ ಮಾದರಿಯಲ್ಲಿ ವರ್ತಿಸಿರುವುದಾಗಿ ಐಸಿಸಿ ತಿಳಿಸಿದೆ.
ಐಸಿಸಿ 2ನೇ ಮಟ್ಟದ ನಿಯಮಾವಳಿ ಉಲ್ಲಂಘನೆಗೆ ಪಂದ್ಯದ ಸಂಭಾವನೆಯಲ್ಲಿ ಶೇ.50-100ರಷ್ಟು ದಂಡ ಇಲ್ಲವಾದರೆ, ಒಂದು ಟೆಸ್ಟ್ ಅಥವಾ ಎರಡು ಏಕದಿನ ಪಂದ್ಯದ ನಿಷೇಧದ ಶಿಕ್ಷೆ ಎದುರಿಸಬೇಕಾಗುತ್ತದೆ.
ಇನ್ನು ಭಾರತ ತಂಡದ ಆದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್ ನಾಯಕ ಅಲಸ್ಟೇರ್ ಕುಕ್, ಇದು ಭಾರತ ತಂಡ ತಂತ್ರಗಾರಿಕೆ ಎಂದಿದ್ದಾರೆ.